ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಸಂತ ಮೇರಿಕಾಲೇಜು ಶಿರ್ವ : 72ನೇ ಗಣರಾಜ್ಯೋತ್ಸವ ಆಚರಣೆ

Posted On: 26-01-2021 10:44PM

ಶಿರ್ವ: ದೇಶವು 72ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸುತ್ತಿದೆ.ಈ ದಿನವನ್ನು ಸಂವಿಧಾನ ರಚನಾ ದಿನವೆಂದೂ, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ವಂದನೆಯನ್ನು ಸಲ್ಲಿಸುತ್ತಾ,ಸಂವಿಧಾನ ರಚನಾ ಸಮಿತಿಯ ಸದಸ್ಯರನ್ನು ನೆನೆಯುತ್ತಾ,ಈ ದಿನದ ಮಹತ್ವವನ್ನು ವಿವರಿಸುವ ಮೂಲಕ ನವಯುವಕರು ಮತ್ತು ಜನಪ್ರತಿನಿಧಿಗಳು ಸಂವಿಧಾನದ ಮೂಲಭೂತ ವಿಚಾರಗಳನ್ನು ಅರ್ಥೈಸಿಕೊಂಡು ನವಭಾರತದ ನಿರ್ಮಾಣದಲ್ಲಿ ಮಹತ್ವದ ಹೆಜ್ಜೆಗಳನ್ನು ಇಡಬೇಕೆಂದು ತಿಳಿಸುವ ಮೂಲಕ ರಾಷ್ಟ್ರ ಪ್ರಶ್ನೆ ಬಂದಾಗ ಧರ್ಮ,ಜಾತಿ,ಪ್ರಾಂತೀಯತೆಯನ್ನು ಮರೆತು ನಾವೆಲ್ಲರೂ ಭಾರತೀಯರೆಂಬ ವಿಶಾಲ ಮನೋಭಾವನೆಯನ್ನು ಜಗತ್ತಿನೆಲ್ಲೆಡೆಗೆ ಸಾರಿ,ಭವ್ಯ ಭಾರತದ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಭಾರತದ ಕೀರ್ತಿಯನ್ನು ವಿಶ್ವ ಪಟದಲ್ಲಿ ಬೆಳಗಬೇಕೆಂದು ವಿದ್ಯಾರ್ಥಿ ಸಮುದಾಯಕ್ಕೆ ಮುಖ್ಯ ಅತಿಥಿಯಾಗಿ ಧ್ವಜಾರೋಹಣವನ್ನು ನೆರವೇರಿಸಿ ಶಿರ್ವ ಸಂತ ಮೇರಿ ಕಾಲೇಜಿನ ಪ್ರಾಂಶುಪಾಲರಾದ ಡಾ ಹೆರಾಲ್ಡ್ ಐವನ್ ಮೊನಿಸ್ ರವರು ಕರೆ ನೀಡಿದರು.

ರಾಷ್ರೀಯಯುವ ಸೇನಾದಳಗಳ ನೇತೃತ್ವದಲ್ಲಿಈ ಕಾರ್ಯಕ್ರಮವನ್ನು ಆಚರಿಸಲಾಯಿತು. ಪ್ರತಿಯೊಬ್ಬ ಭಾರತೀಯನೂ ಸ್ವಚ್ಛ ಭಾರತ ಪರಿಕಲ್ಪನೆಯ ಲ್ಲಿ ಶ್ರಮಿಸಿ ದೇಶದ ಪ್ರಗತಿಯಲ್ಲಿಕೈಜೋಡಿಸಬೇಕು. ಅಳಿದ ಮಹಾತ್ಮರ ಬಗ್ಗೆ ಗೌರವ, ಅಭಿಮಾನಅವರ ಸಾಧನೆಯಅರಿವು ಮಾಡಿಕೊಳ್ಳುವುದು ಅಗತ್ಯ ಆ ಮೂಲಕ ವೈಜ್ಞಾನಿಕ ಮನೋಭಾವ ಬೆಳಸಿಕೊಳ್ಳಬೇಕೇಂದು ಗಣರಾಜ್ಯೋತ್ಸವ ಸಂದೇಶ ನಿಡಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ವಿವಿಧ ಘಟಕಗಳ ನೇತ್ರತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಪರೇಡನ ಮುಂದಾಳತ್ವವನ್ನು ಕ್ಯಾಡೆಟ್ ಸೀನಿಯರ್ ಅಂಡರ್ ಆಫೀಸರ್ ಭಟ್ ರಾಮ್ ದಾಸ್ ಸತೀಶ್ ಜೂನಿಯರ್ ಅಂಡರ್ ಆಫೀಸರ್ ಪ್ರವಿತಾ ಆಚಾರ್ಯ , ರಿಯೋನ್ ರಿಷಿ ಅಲ್ಫೊನ್ಸೊ, ಸಾರ್ಜೆಂಟ್ ಮೇಜರ್ ಪ್ರತೀಮಾ ಆಚಾರ್ಯ, ಸಾರ್ಜೆಂಟ್ ರೈನಾ ಅಂದ್ರಾದೆ ನೆರವೇರಿಸಿಕೊಟ್ಟರು.

ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ.ಐರಿನ್ ಮೆಂಡೋನ್ಸ, ಪ್ರೌಢಶಾಲೆಯ ಮುಖೋಪಾಧ್ಯಾಯರಾದ ಗಿಲ್ಬರ್ಟ್ ಪಿಂಟೋ,ಶ್ರೀಮತಿ ಪೌಲಿನ್ ಲೋಬೊ, ಕಾಲೇಜಿನ ವಿವಿಧ ಘಟಕಗಳ ಯೋಜಕರಾದ ಎನ್.ಎಸ್.ಎಸ್ ಶ್ರೀ ಪ್ರೇಮನಾಥ್, ಕು.ರಕ್ಷ, ರೋವರ್ಸ್ ಸ್ಕೌಟ್ ಲೀಡರ್ ಶ್ರೀಪ್ರಕಾಶ್,ರೇಂಜರ್ಸ್ ಲೀಡರ್ ಶ್ರೀಮತಿ ಸಂಗೀತಾ ಪೂಜಾರಿ,ವಿದ್ಯಾರ್ಥಿ ನಾಯಕರಾದ ಅಕ್ಷಯ್, ಸುರೇಖ, ಪ್ರಾಂಕ್ಲೀನ್ ಮಥಾಯಸ್, ಪ್ರತೀಕ್ಷ, ಕ್ಯಾಂಪಸ್‍ನ ಇತರ ಅಧ್ಯಾಪಕ ಮತ್ತು ಅಧ್ಯಾಪಕೇತರ ಬಂಧುಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ.ಪ್ರವೀಣ್‍ಕುಮಾರ್ ರವರು ಸರ್ವರನ್ನೂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಸೆಕೆಂಡ್ ಆಫೀಸರ್ ಜಾನ್ ವಿಲಿಯಂರವರು ವಂದಿಸಿದರು.