ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ವಿಜೇತ ವಿಶೇಷ ಶಾಲೆ : ಗಣರಾಜ್ಯೋತ್ಸವ ದಿನಾಚರಣೆ, ಮೇಕ್ ಸಂ ಒನ್ ಸ್ಮೈಲ್ ತಂಡದಿಂದ ಶಾಲಾ ಗೋಡೆಯಲ್ಲಿ ಇಂಡಿಯಾ ಬಾರ್ಡರ್ ಚಿತ್ರಗಳ ಅನಾವರಣ, ದೇಶದ ಸೈನಿಕರಿಗೆ ಗೌರವ ಸಮರ್ಪಣಾ ಕಾರ್ಯಕ್ರಮ.

Posted On: 27-01-2021 10:46AM

ವಿಜೇತ ವಿಶೇಷ ಶಾಲೆಯಲ್ಲಿ 72ನೇ ವರ್ಷದ ಗಣರಾಜ್ಯೋತ್ಸವ ಹಾಗೂ ಮೇಕ್ ಸಂ ಒನ್ ಸ್ಮೈಲ್ ತಂಡದ ವತಿಯಿಂದ ವಿಜೇತ ವಿಶೇಷ ಶಾಲಾ ಗೋಡೆಯಲ್ಲಿ ಚಿತ್ರಿಸಿದ ಇಂಡಿಯಾ ಬಾರ್ಡರ್ (ಭಾರತ ದ ಗಡಿ ಪ್ರದೇಶ) ಚಿತ್ರಣವನ್ನು ವಿಜೇತ ವಿಶೇಷ ಶಾಲೆಗೆ ಸಮರ್ಪಿಸಿ, ದೇಶದ ಸೈನಿಕರಿಗೆ ಗೌರವ ಸಮರ್ಪಣಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ದ್ವಜಾರೋಹಣವನ್ನು ಶ್ರೀ ಮೋಹನ್ ಶೆಣೈ ಮತ್ತು ಶ್ರೀಮತಿ ಅರುಣಾ ಎಂ. ಶೆಣೈ ದಂಪತಿಗಳು ನೆರವೇರಿಸಿದರು. ಜಿಲ್ಲಾ ನಕ್ಸಲ್ ನಿಗ್ರಹ ದಳದ ಎಸ್.ಪಿ, (ಐ ಪಿ ಎಸ್.) ಅಧಿಕಾರಿ ಶ್ರೀ ನಿಖಿಲ್ ಬುಲ್ಲವರ್ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಶಶಿಧರ್ ಜಿ. ಎಸ್, ಕೆ.ಎಂ.ಇ.ಎಸ್ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ರಾಮಚಂದ್ರ ನೆಲ್ಲಿಕಾರ್, ಮೇಕ್ ಸಮ್ ಒನ್ ಸ್ಮೈಲ್ ತಂಡದ ಪ್ರಖ್ಯಾತ ಕಲಾವಿದರು ಹಾಗೂ ದಂತವೈದ್ಯರು ಡಾ.ವರ್ಣೋಧರ್, ದುರ್ಗಾ ವಿದ್ಯಾ ಸಂಘದ ಅಧ್ಯಕ್ಷರು ಶ್ರೀ ರಾಧಾಕೃಷ್ಣ ಶೆಟ್ಟಿ, ಶಾಲಾ ಸಂಸ್ಥಾಪಕಿ ಡಾ. ಕಾಂತಿ ಹರೀಶ್ ಅದ್ಯಕ್ಷರು ಶ್ರೀ ರತ್ನಾಕರ್ ಅಮೀನ್, ಟ್ರಸ್ಟಿ ಶ್ರೀ ಸಿಯಾ ಸಂತೋಷ್ ನಾಯಕ್, ಶ್ರೀ ಕಿರಣ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮೇಕ್ ಸಂ ಒನ್ ಸ್ಮೈಲ್ ತಂಡದ ವತಿಯಿಂದ ಡಾ. ವರ್ನೋಧರ್ ಹಾಗೂ ಆರ್ಟಿಸ್ಟ್ ಶ್ರೀ ನವೀನ್ ಅವರನ್ನು ಗೌರವಿಸಲಾಯಿತು. ಶ್ರೀ ಮೋಹನ್ ಶೆಣೈ ದಂಪತಿಗಳು ಶಾಲಾ ಮಕ್ಕಳಿಗೆ ಸಿಹಿ ತಿಂಡಿ ಪ್ಯಾಕ್ ವಿತರಿಸುವ ಜತೆಗೆ ಸಂಸ್ಥೆಗೆ ದೇಣಿಗೆ ನೀಡಿ ಸಹಕರಿಸಿದರು. ಮೇಕ್ ಸಂ ಒನ್ ಸ್ಮೈಲ್ ತಂಡದ ಸದಸ್ಯರು ಉಪಸ್ಥಿತರಿದ್ದರು. ವಿಶೇಷ ಶಿಕ್ಷಕಿ ಶ್ರೀಮತಿ ಹರ್ಷಿತಾ ಕಿರಣ್ ಕಾರ್ಯಕ್ರಮ ನಿರೂಪಿಸಿ, ಕು.ವಿದ್ಯಾ ನಾಯ್ಕ್ ವಂದಿಸಿದರು.