ದೊಡ್ಡಣಗುಡ್ಡೆ ಪಂಚ ಜುಮಾದಿ ದೈವಸ್ಥಾನದ ಮಕರ ತಿಂಗಳ ಮಾರಿ ಪೂಜೆ, ಪಂಚ ಜುಮಾದಿ ದೈವದ ದರ್ಶನ ಸೇವೆ ಬೆಳಗ್ಗಿನಿಂದ ರಾತ್ರಿಯವರೆಗೆ ಊರು ಪರವೂರಿನ ಭಕ್ತಾದಿಗಳು ಗಂಧ ಪ್ರಸಾದವನ್ನು ಸ್ವೀಕರಿಸಿ ದೈವದ ಕೃಪೆಗೆ ಪಾತ್ರರಾಗುವ ಮೂಲಕ ಸಂಪನ್ನಗೊಂಡಿತು.
ಈ ಸಂದರ್ಭ ದೊಡ್ಡಣಗುಡ್ಡೆ ಪಂಚ ಜುಮಾದಿ ದೈವಸ್ಥಾನದ ಬಿಲ್ಲವ ಸಮುದಾಯದ ನೂತನ ಗುರಿಕಾರರಾಗಿ ನಿತಿನ್ ಪೂಜಾರಿ ಅವರನ್ನು ಎಲ್ಲರ ಒಪ್ಪಿಗೆಯ ಮೇರೆಗೆ ಆಯ್ಕೆ ಮಾಡಲಾಯಿತು. ದೈವದ ಅನುಗ್ರಹ ಮತ್ತು ಪ್ರಸಾದದೊಂದಿಗೆ ಅಧಿಕಾರ ಸ್ವೀಕಾರ ಮಾಡಿದರು.
ಈ ಸಂದರ್ಭದಲ್ಲಿ ಊರಿನ ಹಿರಿಯರು ಹಾಗೂ ಆಡಳಿತ ಮಂಡಳಿಯ ಮುಖ್ಯಸ್ಥರು ಯು. ಬಿ. ಅಜಿತ್ ಕುಮಾರ್, ಸದಸ್ಯರಾದ ಗೋಪಾಲ ಶೆಟ್ಟಿ, ಶಿವ ಪಾಲನ್, ಸುರೇಶ್ ಪೂಜಾರಿ, ಕೆ. ಯಾದವ್, ಯು. ಗಣೇಶ್, ಪ್ರಕಾಶ್ ಶೆಟ್ಟಿ, ನಿತ್ಯಾನಂದ ಜೋಗಿ, ದಿನೇಶ್ ಬಂಗೇರ, ಉದಯ ನಾಯ್ಕ್ ಹಾಗೂ ದೈವಸ್ಥಾನದ ಅರ್ಚಕರಾದ ವಿನೋದ್ ಶೆಟ್ಟಿ, ವಿಜಯ್ ಶೆಟ್ಟಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು