ಸಾಂತೂರು ಕೊಡಂಗಲ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ವರ್ಷಂಪ್ರತಿ ಜರಗುವ ವಾರ್ಷಿಕ ನೇಮೋತ್ಸವವು ಫೆಬ್ರವರಿ 25, ಗುರುವಾರ ನಡೆಯಲಿದೆ.
23 ರಂದು ರಾತ್ರಿ ಗಂಟೆ 8:30ಕ್ಕೆ ಹಸಿರುವಾಣಿಯೊಂದಿಗೆ ಗರಡಿ ಪ್ರವೇಶ,
24 ರಂದು ಬೆಳಿಗ್ಗೆ 8ಕ್ಕೆ ನವಕ ಪ್ರಧಾನ ಹೋಮ, ರಾತ್ರಿ 6:30 ಕ್ಕೆ ಅಗೆಲು ಸೇವೆ.
25 ರಂದು ರಾತ್ರಿ 7ಕ್ಕೆ ವಾರ್ಷಿಕ ನೇಮೋತ್ಸವ, ರಾತ್ರಿ 8:30ಕ್ಕೆ ಶ್ರೀ ವಿಠಲ ಪೂಜಾರಿ ಮತ್ತು ಕರುಣಾಕರ ಪೂಜಾರಿ ಗರಡಿಮನೆ ಸಾಂತೂರು ಇವರ ವತಿಯಿಂದ ಸಾರ್ವಜನಿಕ ಅನ್ನಸಂತರ್ಪಣೆ, 26ರಂದು ಬೆಳಿಗ್ಗೆ 4ಕ್ಕೆ ಮಾಯಂದಾಲ್ ನೇಮೋತ್ಸವ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.