ಮಂಗಳೂರು : ದ. ಕ. ಜಿಲ್ಲಾ ಮೂಲ್ಯರ ಯಾನೇ ಕುಲಾಲರ ಮಾತೃ ಸಂಘದ ಆಡಳಿತಕೊಳಪಟ್ಟ ಕುಲಶೇಖರ ಶ್ರೀವೀರನಾರಾಯಣ ದೇವಸ್ಥಾನ ಇದರ ಜೀರ್ಣೋದ್ದಾರ ಕೆಲಸ ಕಾರ್ಯಗಳು ಅತ್ಯಂತ ಸುಲಲಿತವಾಗಿ ನಡೆಯುತ್ತಿದ್ದು, ಫೆಬ್ರವರಿ 17, ಬುಧವಾರ ಬೆಳಗ್ಗೆ ಬಾಲಾಲಯ ನಿರ್ಮಾಣದ ಸಲುವಾಗಿ ಭೂಮಿ ಪೂಜೆ ನಡೆಯಿತು.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ವೇದವ್ಯಾಸ ಕಾಮತ್, ದಕ್ಷಿಣಕನ್ನಡ ಜಿಲ್ಲಾ ಮೂಲ್ಯರ ಸಂಘದ ಅಧ್ಯಕ್ಷರಾದ ಮಯೂರ ಉಲ್ಲಾಲ್, ದ.ಕ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಶ್ರೀ ಸತೀಶ್ ಕುಂಪಲ, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪುರುಷೋತ್ತಮ ಕಲ್ಬಾವಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಾಮೋದರ ಬಂಗೇರ, ಸೇವಾ ಸಮಿತಿ ಅಧ್ಯಕ್ಷ ಸುಂದರ ಕುಲಾಲ್ ಶಕ್ತಿನಗರ, ಟ್ರಸ್ಟಿನ ಅಧ್ಯಕ್ಷ ಪ್ರೇಮನಂದ ಕುಲಾಲ್, ಸುಂದರ ಸಾಲ್ಯಾನ್, ಶ್ರೀಮತಿ ರೂಪ.ಡಿ.ಬಂಗೇರ, ಗಿರಿಧರ್ ಜೆ. ಮೂಲ್ಯ, ಅನಿಲ್‌ದಾಸ್ ಅಂಬಿಕಾ ರೋಡು,ಪ್ರವೀಣ್ ಬಸ್ತಿ, ಪ್ರದೀಪ್, ಕಿರಣ್,ಸದಾನಂದ ಕುಲಾಲ್,ಕೋಟೆಕಾರು ಪಟ್ಟಣ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಶ್ರೀ ಅನಿಲ್ ಬಗಂಬಿಲ ಎಂ.ಪಿ. ಬಂಗೇರ, ಮುಂಬೈ ಕುಲಾಲ ಸಂಘದ ಅಧ್ಯಕ್ಷ ದೇವದಾಸ್ ಕುಲಾಲ್ ಮಾಜಿ ಅಧ್ಯಕ್ಷ ಗಿರೀಶ ಸಾಲ್ಯಾನ್, ಮುಂಬಯಿ ಕುಲಾಲ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಮಮತಾ ಗುಜರನ್ ಹಾಗೂ ಜಿಲ್ಲೆಯ ಕುಲಾಲ ಸಮಾಜದ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.