ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಬಿರುವೆರ್ ಕಾಪು ಸೇವಾ ಟ್ರಸ್ಟ್ : ಜ್ಞಾನದೀವಿಗೆ ವಿದ್ಯಾರ್ಥಿವೇತನ ವಿತರಣೆ

Posted On: 21-02-2021 08:14PM

ಕಾಪು : ಸಮಾಜದಲ್ಲಿ ಜ್ಞಾನ ಸಂಪತ್ತನ್ನು ಹೊಂದಿರುವ ಪ್ರತಿಭೆಗಳಿಗೆ ಕೊರತೆಯಿಲ್ಲ. ಅವರ ಗುರುತಿಸುವಿಕೆ ಹಾಗೂ ಅವರಿಗೆ ಸರಿಯಾದ ಮಾರ್ಗದರ್ಶನವನ್ನು ಹೆತ್ತವರು,ಗುರುಗಳು ಮತ್ತು ಸಂಘ-ಸಂಸ್ಥೆಗಳು ಮಾಡಬೇಕಾಗಿದೆ. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ, ಆಶಕ್ತರ ಪಾಲಿನ ಸೇವಾ ಸಂಸ್ಥೆಯಾಗಿ ದುಡಿಯುತ್ತಿರುವ ಬಿರುವೆರ್ ಕಾಪು ಸೇವಾ ಟ್ರಸ್ಟ್ ನ ಕಾರ್ಯ ಶ್ಲಾಘನೀಯ ಎಂದು ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಹೇಳಿದರು. ಅವರು‌ ಬಿರುವೆರ್ ಕಾಪು ಸೇವಾ ಟ್ರಸ್ಟ್ ಆಶ್ರಯದಲ್ಲಿ ಕಾಪು ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಜರಗಿದ ಕಾಪು ತಾಲೂಕಿನ ಪ್ರತಿಭಾವಂತ ಬಿಲ್ಲವ ಹಾಗೂ ಇತರ ಸಮಾಜದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ 2020-21ನೇ ಸಾಲಿನ ಜ್ಞಾನದೀವಿಗೆ ವಿದ್ಯಾರ್ಥಿವೇತನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಪಂಚಾಯತ್ ಸದಸ್ಯರಾದ ಗೀತಾಂಜಲಿ ಸುವರ್ಣ ಮಾತನಾಡಿ ಹೆತ್ತವರು ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಿ ಮೂಲಕ ಅವರ ಭವಿಷ್ಯ ರೂಪಿಸಬೇಕಾಗಿದೆ. ಮಕ್ಕಳು ಕಲಿತು ಉದ್ಯೋಗ ಸೇರಿ ತಮಗೆ ಸಹಾಯ ನೀಡಿದ ಸಂಸ್ಥೆಗಳಿಗೆ ತಮ್ಮಿಂದಾದ ಸಹಾಯ ಮಾಡಬೇಕಾಗಿದೆ ಎಂದರು. ಕಲಿಕೆಯ ಹಂತದಲ್ಲಿಯೇ ಮುಂದಿನ ಗುರಿಯ ಬಗ್ಗೆ ದೃಢ ನಿರ್ಧಾರ ಮಕ್ಕಳಲ್ಲಿ ಇರಬೇಕು. ನಾಗರಿಕ ಸೇವಾ ಪರೀಕ್ಷೆಗಳ ಕಡೆಗೂ ಮಕ್ಕಳು ಗಮನಹರಿಸ ಬೇಕಾಗಿದೆ. ಕಲಿಕೆಯೊಂದಿಗೆ ವೃತ್ತಿಪರ ಕೌಶಲ್ಯವು ಇಂದು ಅನಿವಾರ್ಯ ಎಂದು ಶ್ರೀಗುರು ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ರಮೇಶ್ ಜಿ. ಅಂಚನ್ ಹೇಳಿದರು. ಕಾಪು ಪುರಸಭೆಯ ಅಧ್ಯಕ್ಷರಾದ ಅನಿಲ್ ಕುಮಾರ್ ಟ್ರಸ್ಟ್ ನ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭಹಾರೈಸಿದರು.

ವಿದ್ಯಾರ್ಥಿ ವೇತನ ವಿತರಣೆ : ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಆರ್ಥಿಕವಾಗಿ ಹಿಂದುಳಿದ ಸುಮಾರು 40 ವಿದ್ಯಾರ್ಥಿಗಳಿಗೆ 1ಲಕ್ಷಕ್ಕೂ ಮಿಕ್ಕಿ ವಿದ್ಯಾರ್ಥಿವೇತನ ವಿತರಿಸಲಾಯಿತು. ಗೌರವ ವಂದನೆ : ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ವಿಶಿಷ್ಟ ಶ್ರೇಣಿ ಪಡೆದ ಮಕ್ಕಳಿಗೆ ಹಾಗೂ ಕಾರಣಿಕ ಕ್ಷೇತ್ರ ಶ್ರೀ ಪೊಯ್ಯ ಪೊಡಿಕಲ್ಲ ಗರಡಿಯ ಪಾತ್ರಿಗಳಾದ ಜಗ್ಗು ಪೂಜಾರಿ, ಶ್ರೀನಿವಾಸ ಪೂಜಾರಿ ಹಾಗೂ ಕಾಪುಕ್ಷೇತ್ರಕ್ಕೆ ಅಧಿಕಾರ ಪಟ್ಟದಲ್ಲಿರುವ ಶ್ರೀ ಧೂಮಾವತಿ ದೇವಸ್ಥಾನದ ಅರ್ಚಕರಾದ ಹರಿಶ್ಚಂದ್ರ ಕೋಟ್ಯಾನ್ ಮತ್ತು ವಿದ್ಯಾರ್ಥಿವೇತನಕ್ಕೆ ಧನ ಸಹಾಯ ಮಾಡಿದವರನ್ನು ಗೌರವಿಸಲಾಯತು. ಇದೇ ಸಂದರ್ಭ ಆರೋಗ್ಯ ಸಮಸ್ಯೆಯಿರುವ ವ್ಯಕ್ತಿಯೊರ್ವರಿಗೆ ಟ್ರಸ್ಟಿನಿಂದ ಆರ್ಥಿಕ ಸಹಾಯ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ಬಿಲ್ಲವರ ಸಹಾಯಕ ಸಂಘದ ಅಧ್ಯಕ್ಷರಾದ ವಿಕ್ರಂ ಕಾಪು ವಹಿಸಿದ್ದರು. ಕಾಪು ಬಿಲ್ಲವರ ಸಹಾಯಕ ಸಂಘದ ಗೌರವಾಧ್ಯಕ್ಷರಾದ ಪ್ರಭಾಕರ್ ಪೂಜಾರಿ, ಬಿರುವೆರ್ ಕಾಪು ಸೇವಾ ಟ್ರಸ್ಟ್ ನ ಅಡ್ಮಿನ್ ಸುಧಾಕರ ಸಾಲ್ಯಾನ್ ಹಾಗೂ ಟ್ರಸ್ಟ್ ನ ಸದಸ್ಯರು ಉಪಸ್ಥಿತರಿದ್ದರು. ಸುಧಾಕರ್ ಪೂಜಾರಿ ಸ್ವಾಗತಿಸಿ, ಅತಿಥ್ ಸುವರ್ಣ ಪಾಲಮೆ ಪ್ರಾರ್ಥಿಸಿ, ಚೇತನ್ ಶೆಟ್ಟಿ ನಿರೂಪಿಸಿದರು.