ಕಾಪು :ಕುರ್ಕಾಲು ಗ್ರಾಮ ಪಂಚಾಯತ್ ನ ಕಟ್ಟಡದಲ್ಲಿರುವ ಸಾರ್ವಜನಿಕ ಗ್ರಂಥಾಲಯವನ್ನು ಡಿಜಿಟಲ್ ಗ್ರಂಥಾಲಯವನ್ನಾಗಿ ಪರಿವರ್ತಿಸಲಾಗಿದ್ದು ದಿನಾಂಕ 24/02/2021ರಂದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಮಹೇಶ್ ಶೆಟ್ಟಿ ಹಾಗೂ ಕಾಪು ತಾಲೂಕು ಪಂಚಾಯತ್ ನ ಕಾರ್ಯನಿರ್ವಾಹಕ ಅಧಿಕಾರಿಯವರಾದ ಶ್ರೀ ವಿವೇಕಾನಂದ ಗಾಂವ್ಕರ್ ಉದ್ಘಾಟನೆ ಮಾಡಿದರು.
ತಾರಾ ಪ್ರಕಾಶನ, ಬೆಂಗಳೂರು ಇದರ ಟ್ರಸ್ಟಿಯವರಾದ ಅಮೇರಿಕಾದಲ್ಲಿ ಪ್ರಾಧ್ಯಾಪಕರಾಗಿರುವ ಮುಕುಂದ್ ರವರು ಗ್ರಾಮ ಪಂಚಾಯತ್ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿರುವ ಕಂಪ್ಯೂಟರ್ ನ್ನು ಅಳವಡಿಸಿದ್ದು, ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ನ ಆಡಳಿತಾಧಿಕಾರಿಯವರಾಗಿದ್ದ ಕಾಪು ತಾಲೂಕು ಪಂಚಾಯತ್ ನ ಕಾರ್ಯನಿರ್ವಾಹಕ ಅಧಿಕಾರಿಯವರಾದ ಶ್ರೀ ವಿವೇಕಾನಂದ ಗಾಂವ್ಕರ್ ರವರನ್ನು ಸನ್ಮಾನಿಸಲಾಯಿತು.
ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಶ್ರೀಮತಿ ಮಾರ್ಗರೇಟ್ ಸೀಮಾ ಡಿ ಸೋಜ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಸುದರ್ಶನ ರಾವ್, ಸರಿತ, ನಥಾಲಿಯ ಮಾರ್ಟಿಸ್, ಸರೋಜ, ಸ್ವಪ್ನ, ವಿನ್ಸೆಂಟ್ ರೋಡ್ರಿಗಸ್, ಶೋಭಾ, ಮಹೇಶ್ ಶೆಟ್ಟಿ, ಪ್ರಶಾಂತ್, ಸಿಂಧೂ ಪೂಜಾರ್ತಿ, ಪ್ರವೀಣ್, ಮಲ್ಲಿಕಾ, ಗ್ರಂಥಾಲಯ ಇಲಾಖೆಯ ನಿವೃತ್ತ ಉಪನಿರ್ದೇಶಕರಾದ ಶ್ರೀಮತಿ ಪುಷ್ಪ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಂದ್ರಕಲಾ, ಕಾರ್ಯದರ್ಶಿ ಗಾಯತ್ರಿ, ಪಂಚಾಯತ್ ಸಿಬ್ಬಂದಿಗಳಾದ ಶ್ರೀ ಸತೀಶ್, ಶ್ರೀ ಹೇಮನಾಥ್ ಉಪಸ್ಥಿತರಿದ್ದರು.