ಸಿರಿಗನ್ನಡ ರಾಷ್ಟ್ರೀಯ ಸೇವಾ ರತ್ನ ಪ್ರಶಸ್ತಿ ಪುರಸ್ಕೃತರಾದ ಸಮಾಜ ಸೇವಕ ರಾಘವೇಂದ್ರ ಪ್ರಭು,ಕವಾ೯ಲು
Posted On:
28-02-2021 07:49PM
ಉಡುಪಿ : ಸಮಾಜ ಕಲ್ಯಾಣ ಸಂಸ್ಥೆ ಬೆಂಗಳೂರು, ಕನಾ೯ಟಕ ರಕ್ಷಣಾ ವೇದಿಕೆ ಸಪ್ತಸ್ವರ ಸಂಗೀತ ಕಲಾ ಬಳಗ ಬೆಳಗಾವಿ ಮತ್ತು ಮರಳ ಸಿದ್ದೇಶ್ವರ ಕಲಾ ಪೋಷಕ ಸಂಘ ವತಿಯಿoದ ಫೆ.28 ರಂದು ಬೆಳಗಾವಿಯಲ್ಲಿ ರಾಷ್ಟ್ರೀಯ ಕಲಾ ಉತ್ಸವ -2021 ಕಾಯ೯ಕ್ರಮ ನಡೆಯಿತು.
ಈ ಸಂದಭ೯ದಲ್ಲಿ ಸಾಧಕರಿಗೆ ಗೌರವ ವಿಭಾಗದಲ್ಲಿ ಉಡುಪಿ ಜಿಲ್ಲೆಯ ರಾಘವೇಂದ್ರ ಪ್ರಭು,ಕವಾ೯ಲು ರವರು ಸಿರಿಗನ್ನಡ ರಾಷ್ಟ್ರೀಯ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಾಯ೯ಕ್ರಮದಲ್ಲಿ ಆಧ್ಯಾತ್ಮ ಗುರು ಸ್ವಸ್ತಿ ಮಹಾರಾಜ್, ಜಿಲ್ಲಾ ಪೋಲಿಸ್ ಅಧೀಕ್ಷಕ ಸುರೇಶ್ ನಡಿವಾಳ ವಿವಿಧ ಮಠಾಧೀಶರು ಉಪಸ್ಥಿತರಿದ್ದರು.
ಶ್ರೀಯುತರು ಸ್ವಚ್ಚ ಭಾರತ್ ಫ್ರ್oಡ್ಸ್ ಸಂಯೋಜಕರಾಗಿ ವಿವಿಧ ಸಮಾಜಮುಖಿ ಕಾಯ೯ಗಳಲ್ಲಿ ತೊಡಗಿಸಿಕೊಂಡಿದ್ದಾರೆ.