ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಸಂತ ಮೇರಿ ಕಾಲೇಜು, ಶಿರ್ವ ಜಲಸಂರಕ್ಷಣೆ ಮಾಹಿತಿ ಕಾರ್ಯಕ್ರಮ

Posted On: 03-03-2021 10:09PM

ಶಿರ್ವ: ಜಗತ್ತಿನಲ್ಲಿ ಮೂರನೇ ಯುದ್ಧ ಅಂತ ಹೆಸರಿಸುವುದಾದರೆ ಅದು ನೀರಿನ ಸಮಸ್ಯೆ.ಇಂದು ಪ್ರತಿವೊಂದು ರಾಷ್ಟ್ರವೂ ನೀರಿನ ಅಭಾವವನ್ನು ಅನುಭವಿಸುತ್ತಿದೆ. ನೀರಿನ ಸಮೃದ್ಧಿಯಲ್ಲಿ ಭಾರತವು ವಿಶ್ವದಲ್ಲಿ ಎರಡನೇ ದೇಶವಾಗಿದೆ. ಆದರೆ ಅದರ ಸರಿಯಾದ ಬಳಕೆ ಮತ್ತು ಸಂರಕ್ಷಣೆ ಇಲ್ಲದೆ ನೀರಿನ ಕ್ಷಾಮವನ್ನು ನಾವಿಂದು ಎದುರಿಸಬೇಕಾಗಿದೆ. ಇದರ ನಿವಾರಣೆಯಾಗಬೇಕಾದರೆ ನಾವಿಂದು ಮಳೆ ನೀರನ್ನು ಸರಿಯಾದ ರೀತಿಯಲ್ಲಿ ಸಂರಕ್ಷಿಸಿ ಮರು ಬಳಕೆ ಮಾಡುವುದು ಅನಿವಾರ್ಯವಾಗಿದೆ ಎಂದು ರತ್ನ ಶ್ರೀ ಜೋಸೆಫ್ ಜಿ. ರೆಬೆಲ್ಲೊ ಅವರು ನೀರಿನ ಸಂರಕ್ಷಣೆ ಮತ್ತು ಮರುಪೂರಣದ ಬಗ್ಗೆ ಸಂತ ಮೇರಿ ಕಾಲೇಜಿನಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಪ್ರಾಯೋಗಿಕ ವಿವರಣೆಯ ಮೂಲಕ ನೀರಿನ ಸಂರಕ್ಷಣೆಯ ಬಗ್ಗೆ ಸವಿವರವಾದ ಮಾಹಿತಿ ನೀಡಿದರು.

ನೀರಿನ ಬಳಕೆ ಮತ್ತು ಅದನ್ನು ಸರಿಯಾದ ರೀತಿಯಲ್ಲಿ ಶೇಖರಿಸಿ,ಮಿತವಾಗಿ ಬಳಸುವುದರ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಇಂದಿನ ತುರ್ತುಗಳಲ್ಲಿ ಒಂದು. ಇದರ ಸದುಪಯೋಗವನ್ನು ಎಲ್ಲರೂ ಪಡೆಯಬೇಕೆಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲ ಡಾ. ಹೆರಾಲ್ಡ್ ಐವನ್ ಮೋನಿಸ್‍ರವರು ಅಭಿಪ್ರಾಯಪಟ್ಟರು. ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಜೆಸಿಂತ ಡಿ’ಸೋಜ ಮಾತನಾಡಿ ಇಂತಹ ಕಾರ್ಯಕ್ರಮಗಳು ಹೆಚ್ಚು ಜನರಿಗೆ ತಲುಪುವುದು ನೀರಿನ ಬಳಕೆಯನ್ನು ಸಮರ್ಪಕವಾಗಿ ಮಾಡಲು ಅನುಕೂಲವಾಗುತ್ತದೆ ಹಾಗೂ ಈ ಕಾರ್ಯಕ್ರಮವನ್ನು ಕಾಲೇಜು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಈ ಕಾರ್ಯಕ್ರಮವನ್ನು ಕಾಲೇಜಿನ ರಕ್ಷಕ-ಶಿಕ್ಷಕ ಸಂಘ ಮತ್ತು ಗ್ರೀನ್ ಟೀಚರ್ ಪೋರಂ ಸಹಯೋಗದಲ್ಲಿ ಎನೆಸೆಸ್,ಎನ್‍ಸಿಸಿ,ರೋವರ್ಸ ಮತ್ತು ರೇಂಜರ್ಸ್,ಯೂತ್‍ರೆಡ್ ಕ್ರಾಸ್, ಘಟಕಗಳು ಜಂಟಿಯಾಗಿ ಏರ್ಪಡಿಸಿದವು. ವೇದಿಕೆಯಲ್ಲಿ ಘಟಕದ ಸಂಯೋಜಕರಾದ ಉಪನ್ಯಾಸಕರುಗಳಾದ ಯಶೋದ, ವಿಠಲ್ ನಾಯಕ್, ಪ್ರವೀಣ್ ಕುಮಾರ್, ಪ್ರೇಮನಾಥ್, ಮುರಳಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಅಧ್ಯಾಪಕ ಮತ್ತು ಅಧ್ಯಾಪಕ ಬಂಧುಗಳು ಹಾಗೂ ವಿವಿಧ ಘಟಕದ ವಿದ್ಯಾಥಿಗಳು ಭಾಗವಹಿಸಿದ್ದರು. ಸೌಜನ್ಯ ಕಾರ್ಯಕ್ರಮ ನಿರೂಪಿಸಿ, ಸಹನಾ ಸ್ವಾಗತಿಸಿ,ದೀಪ್ತಿ ವಂದಿಸಿದರು.