ಉಡುಪಿ : ನವದೆಹಲಿಯ ಅಖಿಲ ಭಾರತ ಮುದ್ರಕರ ಒಕ್ಕೂಟವು ಏರುತ್ತಿರುವ ಕಾಗದ ಮತ್ತು ಸಾಮಗ್ರಿಗಳ ಬೆಲೆ ಏರಿಕೆಯ ವಿಷಯವಾಗಿ ಕೇಂದ್ರ ಸರಕಾರವು ಕಾಗದ ಮತ್ತು ಕಚ್ಚಾ ಸಾಮಗ್ರಿಗಳ ತಯಾರಿಕಾ ಕೈಗಾರಿಕೆಗಳ ದರ ನಿಯಂತ್ರಣದಲ್ಲಿ ಮಧ್ಯಸ್ಥಿಕೆ ವಹಿಸಲೇಬೇಕೆಂದು ಸೋಮವಾರದಂದು ಜಿಲ್ಲಾಧಿಕಾರಿಗಳಿಗೆ ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ ಮನವಿ ಸಲ್ಲಿಸಿದರು.
ಮುದ್ರಣಕಾರರು ತೀವ್ರವಾದ ಸಂಕಷ್ಟ ಅನುಭವಿಸುತ್ತಿದ್ದು ಉಡುಪಿ ಜಿಲ್ಲೆಯಲ್ಲಿ ಸುಮಾರು 180ಕ್ಕೂ ಹೆಚ್ಚು ಮುದ್ರಣ ಮತ್ತು ಮುದ್ರಣಕ್ಕೆ ಸಂಬಂಧಪಟ್ಟ ಚಟುವಟಿಕೆಗಳನ್ನು ಹೊಂದಿಕೊಂಡುಜೀವನ ಸಾಗಿಸುತ್ತಿದ್ದಾರೆ.
ಮುದ್ರಣಾಲಯಕ್ಕೆ ಬೇಕಾದ ಕಚ್ಚಾವಸ್ತುಗಳನ್ನು ಪೂರೈಸುವ ಡೀಲರ್ ಗಳು ಏಕೆ ಏಕೆ ಹೆಚ್ಚಿಸುವುದರಿಂದ ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎಂದು ಮನವಿಯಲ್ಲಿ ಹೇಳಿಕೊಂಡಿದ್ದಾರೆ
ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕ ಸಂಘದ ಅಧ್ಯಕ್ಷರಾದ ಮಹೇಶ್ ಕುಮಾರ್, ಕಾರ್ಯದರ್ಶಿ ಮನೋಜ್ ಕಡಬ, ಕೋಶಾಧಿಕಾರಿ ಸುಧೀರ್ ಡಿ. ಬಂಗೇರ, ಗೌರವ ಸಲಹೆಗಾರರಾದ ಅಶೋಕ್ ಶೆಟ್ಟಿ, ಜತೆ ಕಾರ್ಯದರ್ಶಿ ಮುರಳಿ ಕೃಷ್ಣ,
ಮಾಜಿ ಅಧ್ಯಕ್ಷರಾದ ರಮೇಶ್ ತಿಂಗಳಾಯ, ಸದಸ್ಯರಾದ ರಿಜಿನಲ್ಡ್ ಡಿ. ಸಿಲ್ವ ಉಪಸ್ಥಿತರಿದ್ದರು.