ಮುಂಡಾಲ ಯುವ ವೇದಿಕೆ ಪಡುಬಿದ್ರಿ : ಸ್ವಾತಂತ್ರ್ಯ ಸಂಭ್ರಮಾಚರಣೆ
Posted On:
15-08-2025 01:14PM
ಪಡುಬಿದ್ರಿ : 79ನೇ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಪಡುಬಿದ್ರಿಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ಮುಂಡಾಲ ಯುವ ವೇದಿಕೆಯ ಜೊತೆಯಾಗಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ, ಸಿಹಿತಿಂಡಿ ವಿತರಿಸಲಾಯಿತು.
ಧ್ವಜಾರೋಹಣವನ್ನು ವೇದಿಕೆಯ ಅಧ್ಯಕ್ಷರಾದ ಮಂಜುನಾಥ ಕರ್ಕೇರ ನೆರವೇರಿಸಿದರು. ವಸತಿ ನಿಲಯದ ಮೇಲ್ವಿಚರಕರಾದ ಬಸವರಾಜ್ ಶುಭಾಶಯವನ್ನು ಸಲ್ಲಿಸಿದರು.
ಮುಂಡಾಲ ವೇದಿಕೆಯ ಸದಸ್ಯರಾದ ಸಂತೋಷ್ ನಂಬಿಯಾರ್ ಮಾತನಾಡಿ, ಸಾವಿರಾರು ವರ್ಷಗಳ ದಾಳಿಯನ್ನು ಈ ದೇಶ ಶೌರ್ಯದ ಮೂಲಕವೇ ಉತ್ತರವನ್ನಿತ್ತು, ತಾಯಿ ಭಾರತಿಯನ್ನು ದುಷ್ಟರಿಂದ ರಕ್ಷಿಸುವಂತ ಕಾರ್ಯ ನಮ್ಮ ಪೂರ್ವಜರು ಮಾಡಿದರು. ಹಾಗಾಗಿ ನಾವು ಇಂದು ಸ್ವತಂತ್ರ ಭಾರತದಲ್ಲಿ ಬದುಕುತ್ತಿದ್ದೇವೆ. ಆದ್ದರಿಂದ ಭವಿಷ್ಯದ ಪೀಳಿಗೆ ಈ ಪರಾಕ್ರಮ, ಶೌರ್ಯ ಬಲಿದಾನದ ವಿಚಾರವನ್ನು ತಿಳಿಸುತ್ತ, ಮುಂದೆ ಅಂತಹ ಸಂದಿಗ್ಧ ಪರಿಸ್ಥಿತಿ ಬಾರದಂತೆ ರಾಷ್ಟರಕ್ಷಣೆಯ ಜವಾಬ್ದಾರಿ ನಮ್ಮಿಂದಾಗಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ವೇದಿಕೆಯ ಕಾರ್ಯದರ್ಶಿ ನಿತೀನ್ ಸಾಲ್ಯಾನ್, ಕೋಶಾಧಿಕಾರಿ ಪ್ರಕಾಶ್ ಮುಂಡ್ಕೂರು, ಸ್ಥಾಪಕಾದ್ಯಕ್ಷರಾದ ಪಿ.ಪ್ರಸನ್ನ ಕುಮಾರ್, ಸದಸ್ಯರಾದ ಸುರೇಶ್ ಪಡುಬಿದ್ರಿ, ಸೋಮಯ್ಯ ಎರ್ಮಾಳ್, ವೇದಿಕೆಯ ಸದಸ್ಯರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.