ತುಳುನಾಡ ಸೀಮೆಯ ಇತಿಹಾಸ ಪ್ರಸಿದ್ದ ಕಾರಣಿಕ ಶಕ್ತಿ ಕೇಂದ್ರ - ಶ್ರೀ ಕ್ಷೇತ್ರ ರಕ್ಷಣಾಪುರ
ಕಾಪು ಶ್ರೀ ಹಳೇ ಮಾರಿಯಮ್ಮ ದೇವಳದ ಅಧಿಕೃತ ನೂತನ ವೆಬ್ ಸೈಟ್ (http://hmtkapu.in) ಮಾಚ್೯ 23, ಮಂಗಳವಾರ ಶ್ರೀದೇವಿಯ ಕಾಲಾವಧಿ ಸುಗ್ಗಿಮಾರಿಪೂಜೆ ಶುಭ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು.
ದೇಶ ವಿದೇಶದಲ್ಲಿರುವ ಭಜಕರಿಗೆ ದೇವಳದಲ್ಲಿ ಜರಗುವ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಹಾಗೂ ಆನ್ ಲೈನ್ ಸೇವಾ ವಿವರಗಳು, ದೇವಳದ ಇತಿಹಾಸ, ದೇವಿಯ ವಿವಿಧ ಅಲಂಕಾರ, ಧಾರ್ಮಿಕ ಕಾರ್ಯಕ್ರಮ ಚಿತ್ರಣಗಳು ಹಾಗೂ ಇನ್ನಿತರ ಯಾವುದೇ ಮಾಹಿತಿಗಳಿಗೆ ಸಂಪರ್ಕಿಸಲು ಸಾಮಾಜಿಕ ಜಾಲತಾಣಗಳಲ್ಲಿ ಈಗಿನ ತಂತ್ರಜ್ಞಾನ ಬಳಸಿ ನೂತನ ವೆಬ್ಸೈಟ್ ತಯಾರಿಸಿದ್ದು ನಾಡಿನ ಸಮಸ್ತ ಭಕ್ತ ಭಾಂದವರು ಇದರ ಸದುಪಯೋಗ ಪಡಕೊಳ್ಳಬೇಕೆಂದು ವಿನಂತಿಸಿದ್ದಾರೆ.