ಕಾಪು : ಮೂಡಬಿದ್ರಿಯಲ್ಲಿ ನಡೆದ ರಾಜ್ಯಮಟ್ಟದ ಕರ್ನಾಟಕ ಯೂನಿಕ್ ಫ್ಯಾಶನ್ - 2021 ಅಲ್ಲಿ ದಿಶಾಲಿ ಪೂಜಾರಿ ಇವರು ಟೀನ್ ಕರ್ನಾಟಕ ಪ್ರಶಸ್ತಿ ಪಡೆದಿರುತ್ತಾರೆ.
ಉಚ್ಚಿಲ ಮಹಾಲಕ್ಷ್ಮಿ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿಯಾಗಿರುವ ಇವರು ನೃತ್ಯದಲ್ಲಿ ಆಸಕ್ತಿ ಹೊಂದಿದವರಾಗಿ ಹಲವು ಕಡೆ ನೃತ್ಯ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಪಡುಬಿದ್ರಿಯ ಸ್ಟೆಪ್ ರೈಡರ್ಸ್ ನೃತ್ಯ ಕಲಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿನಿಯಾಗಿದ್ದಾರೆ. ಕಿರುತೆರೆಯ ಪ್ರಸಿದ್ಧ ಧಾರಾವಾಹಿ ಯಶೋಧ ಇದರಲ್ಲಿಯೂ ನಟಿಸಿರುತ್ತಾರೆ.