ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು : ರಕ್ತದಾನ ಶಿಬಿರ ಹಾಗೂ ಉಚಿತ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣಾ ಶಿಬಿರ

Posted On: 28-03-2021 02:46PM

ಜೆಸಿಐ ಕಾಪು, ಕಾಪು ಗೂಡ್ಸ್ ಟೆಂಪೋ ಮಾಲಕರ ಮತ್ತು ಚಾಲಕರ ಸಂಘ (ರಿ.), ರಕ್ತನಿಧಿ ವಿಭಾಗ ಉಡುಪಿ ಜಿಲ್ಲಾ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಶಿರ್ವ, ಪ್ರಾಥಮಿಕ ಆರೋಗ್ಯ ಕೇಂದ್ರ ಕಾಪು, ಯುವವಾಹಿನಿ (ರಿ.) ಕಾಪು ಘಟಕ, ಸತ್ಯದ ತುಳುವೆರ್ (ರಿ.) ಉಡುಪಿ- ಮಂಗಳೂರು, ಹಿಯಾ ಮೆಡಿಕಲ್ಸ್ ಕಾಪು ಇವರ ಸಹಯೋಗದೊಂದಿಗೆ ವೀರಭದ್ರ ಸಭಾಭವನ ಕಾಪು ಇಲ್ಲಿ ರಕ್ತದಾನ ಶಿಬಿರ ಹಾಗೂ ಉಚಿತ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣಾ ಶಿಬಿರವನ್ನು ಕಾಪು ಪುರಸಭೆಯ ಅಧ್ಯಕ್ಷರಾದ ಅನಿಲ್ ಕುಮಾರ್ ಉದ್ಘಾಟಿಸಿದರು.

ಸನ್ಮಾನ : 50ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿರುವ ಪ್ರವೀಣ್ ಬಂಗೇರರಿಗೆ ಸಾಧಕ ರತ್ನ ಗೌರವ ನೀಡಿ ಪುರಸ್ಕರಿಸಲಾಯಿತು.

ಸತ್ಯದ ತುಳುವೆರ್ (ರಿ.) ಉಡುಪಿ- ಮಂಗಳೂರು ಗೌರವಾಧ್ಯಕ್ಷರಾದ ಶ್ರೀಮತಿ ಗೀತಾಂಜಲಿ ಸುವರ್ಣ, ಉಡುಪಿ ಜಿಲ್ಲಾ ಆಸ್ಪತ್ರೆ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿ ಡಾ| ವೀಣಾ ಕುಮಾರಿ, ಕಾಪು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸುಬ್ರಾಯ ಕಾಮತ್, ಕಾಪು ಗೂಡ್ಸ್ ಟೆಂಪೋ ಮಾಲಕರ ಮತ್ತು ಚಾಲಕರ ಸಂಘದ ಗೌರವಾಧ್ಯಕ್ಷರಾದ ವಿನಯ್ ಬಲ್ಲಾಳ್, ಜೆಸಿಐ ರಕ್ತದಾನ ವಿಭಾಗ ವಲಯ XV, ವಲಯ ಸಂಯೋಜಕರಾದ ಜೆಸಿ ಹರೀಶ್ ಕುಲಾಲ್, ಕಾಪು ಗೂಡ್ಸ್ ಟೆಂಪೋ ಮಾಲಕರ ಮತ್ತು ಚಾಲಕರ ಸಂಘದ ಅಧ್ಯಕ್ಷರಾದ ಶೇಖ್ ನಜೀರ್, ಸತ್ಯದ ತುಳುವೆರ್ (ರಿ.) ಉಡುಪಿ- ಮಂಗಳೂರು ಅಧ್ಯಕ್ಷರಾದ ಪ್ರವೀಣ್ ಬಂಗೇರ, ಕಾಪುವಿನ ಹಿಯಾ ಮೆಡಿಕಲ್ಸ್ ಮಾಲಕರಾದ ಜೇಸಿ ಯೋಗೀಶ್ ರೈ, ಯುವವಾಹಿನಿ (ರಿ.) ಕಾಪು ಘಟಕದ ಅಧ್ಯಕ್ಷರಾದ ಸೌಮ್ಯ ರಾಕೇಶ್, ಕಾಪು ಠಾಣೆಯ ಎಎಸ್ಐ ರಾಜೇಂದ್ರ ಮನಿಯಾಣಿ, ಜೆಸಿಐ ಮತ್ತು ಇತರ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕಾಪು ಜೆಸಿಐ ಅಧ್ಯಕ್ಷರಾದ ಅರುಣಾ ಐತಾಳ್ ಸ್ವಾಗತಿಸಿ, ನೀಲಾನಂದ ನಾಯಕ್ ನಿರೂಪಿಸಿದರು.