ಶ್ರೀ ಗುರು ರಾಘವೇಂದ್ರ ಸಮಾಜ ಸೇವಾ ಮಂಡಳಿ, ಮಹಿಳಾ ಭಜನಾ ಮಂಡಳಿ 92 ಹೇರೂರು : ನೂತನ ಪದಾಧಿಕಾರಿಗಳ ಪದಗ್ರಹಣ
Posted On:
29-03-2021 10:53AM
ಕಾಪು : ಗುರು ರಾಘವೇಂದ್ರ ಸಮಾಜ ಸೇವಾ ಮಂಡಳಿ 92 ಹೇರೂರು, ಶ್ರೀ ಗುರು ರಾಘವೇಂದ್ರ ಮಹಿಳಾ ಭಜನಾ ಮಂಡಳಿ 92 ಹೇರೂರು ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಮಂಡಳಿಯ ಸಭಾಂಗಣದಲ್ಲಿ ನಡೆಯಿತು. ಮಂಡಳಿಯ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ನಾಗರಾಜ ಭಟ್ ಕಲ್ಯಾ ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ನೂತನ ತಂಡಕ್ಕೆ ಶುಭ ಹಾರೈಸಿದರು.
ಅಧಿಕಾರ ಹಸ್ತಾಂತರ : ಸುಜಿತ್ ಕುಮಾರ್ ರವರು ನೂತನ ಅಧ್ಯಕ್ಷರಾದ ಶ್ರೀನಿವಾಸ್ ದೇವಾಡಿಗರವರಿಗೆ ದಿನೇಶ್ ದೇವಾಡಿಗರವರು ನಿತ್ಯಾನಂದ ಆಚಾರ್ಯರವರಿಗೆ ಅಧಿಕಾರ ಹಸ್ತಾಂತರಿಸಿದರು.
ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷರಾದ ವಸಂತಿ ಆಚಾರ್ಯ ಮತ್ತು ಸರಸ್ವತಿ ದೇವಾಡಿಗ ರವರು ನೂತನ ಅಧ್ಯಕ್ಷರಾದ ಶಶಿಕಲಾ ದೇವಾಡಿಗ ಹಾಗೂ ಕಾರ್ಯದರ್ಶಿ ಪವಿತ್ರ ರಾವ್ ರವರಿಗೆ ಅಧಿಕಾರ ಹಸ್ತಾಂತರಿಸಿದರು.
ಭಜನಾ ಮಂಡಳಿಯ ಉಪಾಧ್ಯಕ್ಷರಾಗಿ ನಾರಾಯಣ ಪೂಜಾರಿ ಜೊತೆ ಕಾರ್ಯದರ್ಶಿಯಾಗಿ ಚರಣ್ ದೇವಾಡಿಗ ಕೋಶಾಧಿಕಾರಿಯಾಗಿ ಮೇಘನಾಥ ಆಚಾರ್ಯ, ಮಹಿಳಾ ಭಜನಾ ಮಂಡಳಿಯ ಉಪಾಧ್ಯಕ್ಷರಾಗಿ ಸರಸ್ವತಿ ಕಾಮತ್ ಜೊತೆ ಕಾರ್ಯದರ್ಶಿಯಾಗಿ ಶಾಂತ ಮಂಜುನಾಥ್ ಕೋಶಾಧಿಕಾರಿಯಾಗಿ ಆಶಾ ಹಾಗೂ ಕಾರ್ಯಕಾರಿ ಮಂಡಳಿಯ ಸದಸ್ಯರಿಗೆ ಅಭಿನಂದಿಸಲಾಯಿತು.
ಸಮಾರಂಭದಲ್ಲಿ ಹಿರಿಯ ಸದಸ್ಯರಾದ ದೇವದಾಸ್ ಜೋಗಿ ಶ್ರೀನಿವಾಸ ಪ್ರಭು ಭಜನಾ ತರಬೇತುದಾರರಾದ ರಾಘವೇಂದ್ರ ಭಟ್ ಉಪಸ್ಥಿತರಿದ್ದರು.
ಕುಮಾರಿ ವೃದ್ಧಿ ದೇವಾಡಿಗರವರು ಪ್ರಾರ್ಥಿಸಿ, ಅಧ್ಯಕ್ಷರಾದ ಸುಜಿತ್ ಕುಮಾರ್ ರವರು ಸ್ವಾಗತಿಸಿ, ಉದಯ ದೇವಾಡಿಗರವರು ಕಾರ್ಯಕ್ರಮ ನಿರೂಪಿಸಿ, ನಿತ್ಯಾನಂದ ಆಚಾರ್ಯರವರು ವಂದಿಸಿದರು.