ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಮಣಿಪುರ : ರಸ್ತೆಯ ಇಕ್ಕೆಲದಲ್ಲಿ ರಾಶಿ ಕಸ ಗಮನಿಸದ ಪಂಚಾಯತ್, ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆಯ ಎಚ್ಚರಿಕೆ

Posted On: 29-03-2021 03:29PM

ಕಾಪು : ಮಣಿಪುರ ರೈಲ್ವೆ ಬ್ರಿಡ್ಜ್ ಬಳಿಯ ರಸ್ತೆಯ ಇಕ್ಕೆಳಗಳಲ್ಲಿ ರಾಶಿ ರಾಶಿ ಕಸದ ತಂದು ಸುರಿಯುತ್ತಿದ್ದಾರೆ. ಪಂಚಾಯಿತಿಯಿಂದ ಯಾವುದೇ ವಾಹನಗಳು ಕಸ ವಿಲೇವಾರಿಗೆ ಬರುತ್ತಿಲ್ಲ. ಇದನ್ನು ಹೀಗೆಯೇ ಬಿಟ್ಟರೆ ಮುಂದೆ ತೊಂದರೆಯಾಗುವುದು ಖಂಡಿತ.

ಸಾರ್ವಜನಿಕರ ಅಪೇಕ್ಷೆಯ ಮೇರೆಗೆ ಸಂಬಂಧಪಟ್ಟ ಅಧಿಕಾರಿಗಳು ಬಂದು ಪರಿಶೀಲನೆ ಮಾಡಬೇಕು. ಇಲ್ಲವಾದಲ್ಲಿ ಡಾಕ್ಟರ್ ಚಲಪತಿ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷರು ಸಂತೋಷ್ ಕುಮಾರ್ ಅವರ ನೇತೃತ್ವದಲ್ಲಿ ಪಂಚಾಯಿತಿಯ ಎದುರುಗಡೆ ಕಸವನ್ನು ತಂದು ಹಾಕಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.