ಮಲ್ಲಾರು : ಕೋಟೆ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ಕಾಲಾವಧಿಯ ರಾಶಿ ಮಾರಿಪೂಜೆ ಹಾಗೂ ನೂತನ ಮೂಡುಗೋಪುರ ಸಮರ್ಪಣೆ
Posted On:
29-03-2021 04:48PM
ಕಾಪು : ಮಲ್ಲಾರು ರಾಣ್ಯಕೇರಿಯ ಕೋಟೆ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ಕಾಲಾವಧಿಯ ರಾಶಿ ಮಾರಿಪೂಜೆ ಹಾಗೂ ನೂತನ ಮೂಡುಗೋಪುರ ಸಮರ್ಪಣೆಯು ಮಾಚ್೯ 30 ರಿಂದ 31 ರವರೆಗೆ ನಡೆಯಲಿದೆ.
ಮಾರ್ಚ್ 29, ಸೋಮವಾರ ಗಣಹೋಮ.
ಮಾರ್ಚ್ 30, ಮಂಗಳವಾರ ಬೆಳಿಗ್ಗೆ 6ಕ್ಕೆ ಹೊರೆಕಾಣಿಕೆ ಕಟ್ಟೆಯಲ್ಲಿ ಶ್ರೀ ದೇವಿಯ ಬಿಂಬ ಪ್ರತಿಷ್ಠೆ, ರಾತ್ರಿ 6:30 ಕ್ಕೆ ಹೊರೆಕಾಣಿಕೆ ಕಟ್ಟೆಯಿಂದ ಮೆರವಣಿಗೆಯ ಮೂಲಕ ಶ್ರೀ ದೇವಿಯ ಸನ್ನಿಧಾನಕ್ಕೆ ಹೊರೆಕಾಣಿಕೆ ಹಾಗೂ ಶ್ರೀ ದೇವಿಯ ಬಿಂಬ ಬರುವುದು. ರಾತ್ರಿ 12 ಕ್ಕೆ ಮಹಾಪೂಜೆ, ಶ್ರೀ ದೇವಿಯ ದರ್ಶನ ಸೇವೆ ಹಾಗೂ ರಾಶಿ ಪೂಜಾ ಮಹೋತ್ಸವ, ಸಂಜೆ 8 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಮಾರ್ಚ್ 31, ಬುಧವಾರ ಬೆಳಿಗ್ಗೆ 6ಕ್ಕೆ ಅರಮನೆ ಪೂಜೆ, ಮಧ್ಯಾಹ್ನ 3ಕ್ಕೆ ಮಹಾಪೂಜೆ, ಶ್ರೀ ದೇವಿಯ ದರ್ಶನ ಸೇವೆ, ಪ್ರಸಾದ ವಿತರಣೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.