Updated News From Kaup

ಶಂಕರಪುರ ಸಾಯಿ ಬಾಬಾ ಮಂದಿರದಿಂದ ಆಟೋ ಚಾಲಕರಿಗೆ ಕಿಟ್ ವಿತರಣೆ

Thumbnail
Posted On: 06 May 2020, 10:43 AM

ಉಡುಪಿ(6ಮೇ/2020): ಶಂಕರಪುರ, ಸುಭಾಷ್ ನಗರ, ಇನ್ನಂಜೆ , ಸಾಲ್ಮರ, ಕುರ್ಕಾಲ್ ಅಟೋ ನಿಲ್ದಾಣಗಳ ಆಟೋ ಚಾಲಕರಿಗೆ ಶಂಕರಪುರ ಶ್ರೀ ಸಾಯಿಬಾಬಾ ಮಂದಿರದ ಗುರೂಜಿ ಸಾಯಿಈಶ್ವರ್ ಕಿಟ್ ವಿತರಣೆ ಮಾಡಿದರು. ಒಟ್ಟು 90 ಆಟೋ ಚಾಲಕರಿಗೆ ಕಿಟ್ ವಿತರಣೆ ಮಾಡಿದ ಗುರೂಜಿ ಸಾಯಿಈಶ್ವರ್ ಮಾತನಾಡಿ "ಶಂಕರಪುರ ಶ್ರೀ ಸಾಯಿಬಾಬಾ ಮಂದಿರ ಜೀರ್ಣೋದ್ಧಾರ ಮಾಡಲು ದಾನಿಗಳು ನೀಡಿದ ದೇಣಿಗೆಯನ್ನು ಕರೋನಾ ಸಂತ್ರಸ್ತರಿಗೆ ನೆರವಿಗೆ ಉಪಯೋಗಿಸುತ್ತಿದ್ದು, ಅಟೋ ಚಾಲಕರು ಅನೇಕ ದಿನದಿಂದ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಷ್ಟದಲ್ಲಿ ಇದ್ದು ನಾವು ನೀಡಿದ ಸ್ವಲ್ಪ ಸಹಾಯ ಅಕ್ಷಯವಾಗಲಿ" ಎಂದು ಹರಸಿದರು. ಮಂದಿರದ ದಾನಿಗಳಾದ ಆಶಿಶ್ ಕೆನೆಟ್ ಮಾರ್ಟಿಸ್ ಪರವಾಗಿ ಜೋಯಿಲ್ಲನ್ ಪಿರೇರ ಉಪಸ್ಥಿತಿ ಇದ್ದರು. ಮಂದಿರದ ಟ್ರಸ್ಟೀ ವಿಶ್ವನಾಥ ಸುವರ್ಣ, ಜಿ.ಪಂ.ಸದಸ್ಯೆ ಗೀತಾಂಜಲಿ ಸುವರ್ಣ, ಗ್ರಾ.ಪಂ.ಮಾಜಿ ಅಧ್ಯಕ್ಷ ಅಶೋಕ್ ರಾವ್, ವಿಜಯ್ ಕುಂದರ್, ಪ್ರಕಾಶ್ ಆಚಾರ್ಯ, ಪುರಂದರ್ ಸಾಲ್ಯಾನ್, ಗಣೇಶ್ ಪಾಲನ್, ಮನೋಹರ್ ಶಂಕರಪುರ, ಸತೀಶ್ ದೇವಾಡಿಗ, ಅಮಿತ್ ಬಜಪೆ ಉಪಸ್ಥಿತರಿದ್ದರು.

ಎರ್ಮಾಳು; ಬಡ ಅಶಕ್ತರಿಗೆ ದಿನಸಿ ಸಾಮಾಗ್ರಿ ವಿತರಣೆ

Thumbnail
Posted On: 05 May 2020, 06:32 PM

ಕೋವಿಡ್ 19 ವಾರಿಯರ್, ಎರ್ಮಾಳು ಶ್ರೀನಿಧಿ ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ನವೀನ್ ಅವರು ಗುರುತಿಸಿದ 16 ತೀರಾ ಬಡ ಕುಟುಂಬಗಳಿಗೆ ದಾನಿಗಳಾದ ಎರ್ಮಾಳು ಹೊಸಮನೆ ಡಿ.ಎಂ. ಶೆಟ್ಟಿ, ಪ್ರತಿಭಾ ಡಿ. ಶೆಟ್ಟಿ ದಂಪತಿ, ಮತ್ತು ಜಯಂತಿ ಚೌಟ ಅವರು ಕೊಡಮಾಡಿದ ಅಕ್ಕಿ ಸಹಿತ ನಿತ್ಯ ಬಳಕೆಯ ದಿನಸಿ ಸಾಮಾಗ್ರಿಗಳನ್ನು ಎರ್ಮಾಳು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಬಳಿ ಮೇ 5ರಂದು ವಿತರಿಸಲಾಯಿತು. ಕೋವಿಡ್ 19 ಕಾರ್ಯಕರ್ತೆಯಾಗಿ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಸಂದರ್ಭ ಈ ಬಡ ಕುಟುಂಬಗಳನ್ನು ಗುರುತಿಸಿ ಸ್ವತಃ ಮುತುವರ್ಜಿ ವಹಿಸಿ ದಾನಿಗಳ ಸಹಕಾರ ಪಡೆದುಕೊಂಡು ಶಶಿಕಲಾ ನವೀನ್ ಅವರು ಆಹಾರದ ಕಿಟ್ ವಿತರಣೆಗೆ ಸಹಕರಿಸಿದ್ದಾರೆ ಈ ಸಂದರ್ಭ ದಾನಿಗಳು ಕೋವಿಡ್ 19 ವಾರಿಯರ್ ಶಶಿಕಲಾ ನವೀನ್ ಅವರನ್ನು ಅಭಿನಂದಿಸಿದರು.

ಪಡುಬಿದ್ರಿ : ಲಾಕ್ಡೌನ್ ಸಡಿಲಿಕೆ, ಸಾಮಾಜಿಕ ಅಂತರ, ನಿಯಮ ಪಾಲಿಸದ ಜನತೆ

Thumbnail
Posted On: 05 May 2020, 01:35 PM

ಇಂದಿನಿಂದ ಉಡುಪಿ ಜಿಲ್ಲೆಯಲ್ಲಿ ಬೆಳಿಗ್ಗೆ 7ರಿಂದ ಸಂಜೆ7 ರವರೆಗೆ ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆ. ಪಡುಬಿದ್ರಿ ಪೇಟೆಭಾಗದಲ್ಲಿ ಕೆಲವು ಕಡೆಯಲ್ಲಿ ಜನರು ಸಾಮಾಜಿಕ ಅಂತರ ಕಾಯದೆ ಅಗತ್ಯ ವಸ್ತುಗಳ ಖರೀದಿ ಮಾಡುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಅಂಗಡಿ ಮಾಲೀಕರುಗಳು ಮೌನವಹಿಸಿದ್ದಾರೆ. ನಿನ್ನೆಯಂತೆ ಇಂದು ಮದ್ಯ ಖರೀದಿಸಲು ಜನ ಸಾಲಿನಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು. ಗಡಿಭಾಗದಲ್ಲಿಯೂ ಜನರು ಏನೇನೋ ಸಬೂಬು ನೀಡಿ ಬರಲು ಪ್ರಯತ್ನಿಸುವುದು ಕಂಡು ಬಂದಿದೆ. ಪೇಟೆಯಲ್ಲಿ ವಾಹನಗಳಲ್ಲಿ ಇಂತಿಷ್ಟೇ ಜನ ಪ್ರಯಾಣಿಸಬೇಕೆಂಬ ನಿಯಮವಿದ್ದರೂ ಜನ ಪಾಲಿಸುತ್ತಿಲ್ಲ. ಈ ಬಗ್ಗೆ ಪೋಲೀಸರು ಮೌನವಹಿಸಿರುವುದು ಕಂಡು ಬಂದಿದೆ.

ನಾಳೆಯಿಂದ ಉಡುಪಿಯಲ್ಲೂ 7 to 7 ಲಾಕ್ ಡೌನ್ ಸಡಿಲಿಕೆ

Thumbnail
Posted On: 04 May 2020, 08:38 PM

ಉಡುಪಿ ಜಿಲ್ಲೆಯಲ್ಲಿ ಬೆಳಗ್ಗೆ 7 ರಿಂದ ರಾತ್ರಿ 7ರವರೆಗೆ ಲಾಕ್ಡೌನ್ ಸಡಿಲಿಕೆ – ಶಾಸಕ ರಘುಪತಿ ಭಟ್ ಉಡುಪಿ : ಕೋವಿಡ್-19 ನಿಯಂತ್ರಣದ ಹಿನ್ನೆಲೆಯಲ್ಲಿ ವಿಧಿಸಲ್ಪಟ್ಟ ಲಾಕ್ಡೌನ್ ಮೇ 17ರವರೆಗೆ ಮುಂದುವರಿದಿದ್ದು ಉಡುಪಿ ಜಿಲ್ಲೆಯಲ್ಲಿ ಮೇ 5ರಿಂದ ಬೆಳಗ್ಗೆ 7ರಿಂದ ರಾತ್ರಿ 7ರವರೆಗೆ ಲಾಕ್ಡೌನ್ ಸಡಿಲಿಸಲಾಗಿದೆ. ರಾತ್ರಿ 7ರಿಂದ ಬೆಳಗ್ಗೆ 7ರವರೆಗೆ ಲಾಕ್ಡೌನ್ ಮುಂದುವರಿಯಲಿದೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ. ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರ ಜೊತೆ ಸಭೆ ನಡೆಸಿ ಉಡುಪಿಯಲ್ಲಿ ಲಾಕ್ ಡೌನ್ ಸಡಿಲಿಕೆ ವಿಚಾರದಲ್ಲಿ ಚರ್ಚೆ ನಡೆಸಲಾಗಿತ್ತು ಅದರಂತೆ ಮೇ 4 ರಿಂದ ಬೆಳಿಗ್ಗೆ 7 ಗಂಟೆಯಿಂದ 1 ಗಂಟೆಯ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಆದರೆ ಇಂದು ಬೆಳಿಗ್ಗೆ ನಗರದಲ್ಲಿನ ಜನದಟ್ಟಣೆಯನ್ನು ಗಮನಿಸಿ ಜಿಲ್ಲೆಯ ಎಲ್ಲಾ ಶಾಸಕರ ಜೊತೆ ಚರ್ಚೆ ನಡೆಸಿದ ಬಳಿಕ ಜಿಲ್ಲಾಧಿಕಾರಿಗಳ ಅನುಮತಿ ಮೇರೆಗೆ ಬೆಳಗ್ಗೆ 7ರಿಂದ ರಾತ್ರಿ 7ರವರೆಗೆ ಲಾಕ್ಡೌನ್ ಸಡಿಲಿಸಲಾಗಿದೆ ಎಂದರು. ಉಡುಪಿಯಲ್ಲಿ ನಾಳೆಯಿಂದ ಬೆಳಿಗ್ಗೆ 7ರಿಂದ ಸಂಜೆ 7ರ ವರೆಗೆ ಅಂಗಡಿ ಮುಂಗಟ್ಟುಗಳು ತೆರೆಯಲು ಅವಕಾಶ ನೀಡಲಾಗಿದೆ ಅಲ್ಲದೆ ವೈನ್ ಶಾಪ್ಗಳು ಕೂಡ ಬೆಳಿಗ್ಗೆ 9 ರಿಂದ ಸಂಜೆ 7ರ ವರೆಗೆ ಕಾರ್ಯ ನಿರ್ವಹಿಸಲಿದೆ

ಕಾಪು ಜನತೆಗೆ ರಿಲೀಫ್ ನೀಡಿದಂತಾಗಿದೆ - ಮದ್ಯ ಖರೀದಿಗೆ ಮುಗಿಬಿದ್ದ ಜನತೆ

Thumbnail
Posted On: 04 May 2020, 11:45 AM

ರಾಜ್ಯ ಸರ್ಕಾರ ಇಂದಿನಿಂದ ನಿರ್ದಿಷ್ಟ ಅವಧಿಯವರೆಗೆ ಮದ್ಯ ಮಾರಾಟ ಮಾಡಲು ಅನುಮತಿ ನೀಡಿದ್ದು ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಕಾಪು,ಕಟಪಾಡಿ, ಪಡುಬಿದ್ರಿ ಸೇರಿದಂತೆ ಇನ್ನು ಹಲವೆಡೆ ವೈನ್ ಶಾಪ್ಗಳು ತೆರೆದಿದ್ದು ಮದ್ಯಕ್ಕಾಗಿ ಇಂದು ಬೆಳಿಗ್ಗೆಯಿಂದಲೇ ಜನರು ಮುಗಿಬಿದ್ದಿದ್ದಾರೆ.. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪೊಲೀಸ್ ಸಿಬ್ಬಂದಿಗಳು ಹಾಗೂ ಸ್ವಯಂ ಸೇವಕರು ಜನರಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಒಂದೆಡೆ ಮದ್ಯಕ್ಕಾಗಿ ಜನರು ಮುಗಿಬಿದ್ದಿದ್ದಾರೆ ಇನ್ನೊಂದೆಡೆ 1 ಗಂಟೆಯ ವರೆಗೆ ಕೆಲವೊಂದು ಅಂಗಡಿಗಳಿಗೆ ಅನುಮತಿ ನೀಡಿರುವುದರಿಂದ ಜನರು ಅಗತ್ಯ ವಸ್ತುಗಳ ಖರೀದಿಗೆ ಆಗಮಿಸಿದ್ದು ಕಾಪುವಿನಲ್ಲಿ ಬಾರಿ ವಾಹನ ಸಂಚಾರವಿದ್ದು. ಕಾಪು ಜನತೆಗೆ ರಿಲೀಫ್ ನೀಡಿದಂತಾಗಿದೆ.

ಬಂಡ್ರ್ಯಾಕರ್ ಕೊರಗಜ್ಜನಿಗೆ ಸರಳ ರೀತಿಯಲ್ಲಿ ಪೂಜಾ ವಿಧಿ ವಿಧಾನ ನೆರೆವೇರಿಸಲಾಯಿತು

Thumbnail
Posted On: 03 May 2020, 08:27 PM

ಕಾಪು ತಾಲೂಕಿನ ಕಲ್ಲುಗುಡ್ಡೆ ಬಂಡ್ರ್ಯಾಕರ್ ಕೊರಗಜ್ಜ ಕ್ಷೇತ್ರದಲ್ಲಿ ವರ್ಷಾಂಪ್ರತಿ ನಡೆಯುವ ನೇಮೋತ್ಸವ ಕೊರೊನ ನಿಮಿತ್ತ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎನ್ನುವ ಸರಕಾರದ ಆಜ್ಞೆಯನ್ನು ಪಾಲಿಸುವ ಸಲುವಾಗಿ ಶಾಸ್ತ್ರೋಕ್ತವಾಗಿ ಸರಳ ರೀತಿಯಲ್ಲಿ ಪೂಜಾ ವಿಧಿ ವಿಧಾನಗಳನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು

ಕುರ್ಕಾಲು ರಕ್ತ ದಾನ ಶಿಬಿರ ಯಶಸ್ವಿ ಕಾರ್ಯಕ್ರಮ

Thumbnail
Posted On: 03 May 2020, 08:01 PM

ಕೊರೊನ ಪರಿಣಾಮದಿಂದ ಬ್ಲಡ್ ಬ್ಯಾಂಕ್ನಲ್ಲಿ ರಕ್ತದ ಕೊರತೆ ಇದ್ದದ್ದರಿಂದ ಕುರ್ಕಾಲು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ಒಂಬತ್ತರಿಂದ ಮದ್ಯಾಹ್ನ ಒಂದರವರೆಗೆ ಕುರ್ಕಾಲು ಯುವಕ ಮಂಡಲ ಮತ್ತು ಲಯನ್ಸ್ ಕ್ಲಬ್ ಸುಭಾಸ್ನಗರ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ರಕ್ತ ದಾನ ಶಿಬಿರವನ್ನು ಆಯೋಜಿಸಲಾಯಿತು, ಈ ಶಿಬಿರದಲ್ಲಿ ನಿರೀಕ್ಷೆಗೂ ಮಿಕ್ಕಿ 130 ಜನರು ರಕ್ತದಾನ ಮಾಡಿದ್ದು ಈ ಸಂದರ್ಭದಲ್ಲಿ ಗೀತಾಂಜಲಿ ಸುವರ್ಣ ಕಟಪಾಡಿ , ದೇವುಪುತ್ರ ಕೋಟ್ಯಾನ್, ವಿಶಾಖ್ ಜಿ ಶೆಟ್ಟಿ, ದಿನಕರ ಶೆಟ್ಟಿ, ಡಿ ಆರ್ ಕೋಟ್ಯಾನ್, ಪ್ರವೀಣ್ ಕುಮಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು..

15 ದಿನಗಳ ನಂತರ ಮತ್ತೇ ರಿಕ್ಷಾ ಚಾಲಕರಿಗೆ ನೆರವು ನೀಡಿದ ದಾನಿ

Thumbnail
Posted On: 01 May 2020, 06:18 PM

ಮಡುಂಬು ವಿದ್ವಾನ್ ಕೆ.ಪಿ.ಶ್ರೀನಿವಾಸ್ ತಂತ್ರಿಗಳು ಕೊರೊನ ಲಾಕ್ಡೌನ್ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಕಾಪು, ಉದ್ಯಾವರ, ಶಂಕರಪುರ, ಇನ್ನಂಜೆ ಸೇರಿದಂತೆ ಇನ್ನು ಅನೇಕ ಕಡೆಗಳಲ್ಲಿ ಇರುವ ರಿಕ್ಷಾ ಚಾಲಕರನ್ನು ಗುರುತಿಸಿ. 160 ರಿಕ್ಷಾ ಚಾಲಕರ ಕುಟುಂಬಗಳಿಗೆ 15 ದಿನಕ್ಕೆ ಬೇಕಾಗುವಷ್ಟು ದಿನಬಳಕೆಯ ಸಾಮಗ್ರಿಗಳನ್ನು ಏಪ್ರಿಲ್ 16ರಂದು ನೀಡಿದ್ದರು. ಇದೀಗ ರಿಕ್ಷಾ ಚಾಲಕರಿಗೆ ನೀಡಿದ್ದ ಸಾಮಗ್ರಿಗಳು ಸಂಪೂರ್ಣವಾಗಿ ಖಾಲಿಯಾಗಿದ್ದು ಇದನ್ನರಿತ ಶ್ರೀನಿವಾಸ್ ತಂತ್ರಿಗಳು ಮತ್ತೇ ಸಾಮಗ್ರಿಗಳನ್ನು ನೀಡುವ ಕಾಯಕದಲ್ಲಿ ತೊಡಗಿದ್ದಾರೆ. ಈ ಹಿಂದೆ ನೀಡಿದವರಿಗೆ ಮತ್ತೇ ಅಕ್ಕಿ, ಮಟ್ಟು ಗುಳ್ಳ, ಸೌತೆಕಾಯಿ ಹಾಗೂ ಇನ್ನಿತರ ದಿನ ಬಳಕೆಯ ಸಾಮಗ್ರಿಗಳಿರುವ ಕಿಟ್ ತಯಾರಿಸಿ ಒಟ್ಟು 200 ರಿಕ್ಷಾ ಚಾಲಕರ ಕುಟುಂಬಕ್ಕೆ ಹಂಚಿದ್ದಾರೆ . ಈ ಸಂದರ್ಭದಲ್ಲಿ ಸುರೇಶ್ ಶೆಟ್ಟಿ ಮಡುಂಬು, ಉಮೇಶ್ ಅಂಚನ್ ಮಡುಂಬು, ಸುಬ್ರಹ್ಮಣ್ಯ ಭಟ್, ಶ್ರೇಯಸ್ ಭಟ್ ಹಾಗೂ ಯುವಸೇನೆ ಮಡುಂಬು ಇದರ ಸದಸ್ಯರು ಉಪಸ್ಥಿತರಿದ್ದರು..

ಇನ್ನಂಜೆ ಹಾಲು ಉತ್ಪಾದಕರ ಸಂಘದ ಹೈನುಗಾರ ಸದಸ್ಯರಿಗೆ ಕಿಟ್ ವಿತರಣೆ

Thumbnail
Posted On: 30 Apr 2020, 09:11 PM

ಇನ್ನಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಸಂಘದ ಎಲ್ಲಾ ಹೈನುಗಾರ ಸದಸ್ಯರಿಗೆ ಹಾಗು ಸಿಬ್ಬಂದಿ ವರ್ಗದವರಿಗೆ ತಲಾ 500 ರೂಪಾಯಿಯ ಆಹಾರ ಸಾಮಗ್ರಿಗಳ 240 ಕಿಟ್ಟುಗಳನ್ನು ತಾರೀಖು 30-4-2020ರಂದು ಸಂಘದ ಅಧ್ಯಕ್ಷರಾದ ಲಕ್ಷ್ಮಣ್ ಕೆ ಶೆಟ್ಟಿ, ಹಾಗು ಉಪಾಧ್ಯಕ್ಷರಾದ ಮಹೇಶ್ ಸುವರ್ಣ, ನಿರ್ದೇಶಕರಾದ ರಾಘವೇಂದ್ರ ಉಪಾದ್ಯಾಯ, ರಾಮ ಶೆಟ್ಟಿ ಮಡುಂಬು, ಶಿವರಾಮ ಶೆಟ್ಟಿ, ಉದಯ ಮೂಲ್ಯ, ಉಮೇಶ್ ಆಚಾರ್ಯ, ನಾಗರಾಜ್ ಮುಚಂತಾಯ, ಜಯ ಪೂಜಾರಿ, ಶ್ರೀಮತಿ ಸುಮತಿ ಅಂಚನ್, ಶ್ರೀಮತಿ ಬೇಬಿ, ಪದ್ಮ ಮುಖಾರಿ ಯವರ ಉಪಸ್ಥಿತಿಯಲ್ಲಿ ವಿತರಿಸಲಾಯಿತು. ಸಂಘದ ಕಾರ್ಯನಿರ್ವಾಹಣಾದಿಕಾರಿ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ ಧನ್ಯವಾದ ನೀಡಿದರು.

ಕಾಪು : ಆಸುಪಾಸಿನ ಕಟ್ಟಡಗಳಿಗೆ ಹಾನಿಯಾದರೆ ಸ್ಥಳೀಯಾಡಳಿತವೇ ನೇರ ಹೊಣೆ

Thumbnail
Posted On: 30 Apr 2020, 02:56 PM

ಕಾಪು ತಾಲೂಕಿನ ಉಳಿಯಾರಗೋಳಿ ಗ್ರಾಮದಲ್ಲಿ ಪ್ರಸಾದ್ ಕಾಮತ್ ಎಂಬುವವರು ಸ್ವಂತ ಜಮೀನಿನಲ್ಲಿ ಸಣ್ಣದೊಂದು ವಾಣಿಜ್ಯ ಕಟ್ಟಡದ ನಿರ್ಮಾಣಕ್ಕೆ ಮಾರ್ಚ್ 12 ರಂದು ಶಿಲಾನ್ಯಾಸ ಮಾಡಿದ್ದು. ಮಳೆಗಾಲ ಆರಂಭವಾಗುವ ಮೊದಲೇ ತಳ ಅಂತಸ್ತಿನ ಕಾಮಗಾರಿ ಮುಗಿಯಬೇಕೆಂಬ ತುರಾತುರಿಯಲ್ಲಿ 10 ಅಡಿ ಆಳಕ್ಕೆ ಗುಂಡಿ ತೋಡಿ ಇನ್ನೇನು ತಳಪಾಯ ಹಾಕಬೇಕು ಅನ್ನುವಷ್ಟರಲ್ಲಿ ಕೊರೊನ ಮಹಾಮಾರಿಯ ಆಗಮನದಿಂದ ಲಾಕ್ಡೌನ್ ಘೋಷಣೆಯಾಗಿ ಕಾಮಗಾರಿ ನಿಲ್ಲಿಸಬೇಕಾಯಿತು. ಕಾಮಗಾರಿ ಸ್ಥಗಿತಗೊಂಡಿರುವ ಜಮೀನಿನ ಮಣ್ಣು ಕೆಂಪು ಮಣ್ಣಾಗಿದ್ದು ಇದನ್ನು ಹೂ ಮಣ್ಣು ಎಂದು ಕರೆಯುತ್ತಾರೆ. ಒಂದು ವೇಳೆ ಮಳೆ ಬಂದರೆ ಈ ಮಣ್ಣು ಜಾರಿ ಅಕ್ಕ ಪಕ್ಕದ ಕಟ್ಟಡಗಳಿಗೆ ಬಹಳ ಹಾನಿಯಾಗುವ ಸಂಭವವಿದ್ದು. ಈ ಬಗ್ಗೆ ಸಂಬಂಧಪಟ್ಟ ಸ್ಥಳೀಯ ಆಡಳಿತವನ್ನು ಸಂಪರ್ಕಿಸಿದಾಗ ಸರಕಾರದ ಆದೇಶದಂತೆ ಯಾವುದೇ ರೀತಿಯ ಕಾಮಗಾರಿಗೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಪ್ರಸಾದ್ ಕಾಮತ್ ಅವರು ಈ ರೀತಿಯಾಗಿ ಹೇಳಿಕೆ ನೀಡಿದ್ದಾರೆ. ಜಿಲ್ಲಾಧಿಕಾರಿಯವರು ಈ ಮೊದಲೇ ಯಾರು ಯಾವುದೇ ಅನುಮತಿಗಾಗಿ ಅವರ ಕಚೇರಿಯ ಬಳಿ ಬರಬಾರದೆಂದು ಆದೇಶಿಸಿರುವುದರಿಂದ ಅವರನ್ನು ಭೇಟಿಯಾಗಲು ಆಗುತ್ತಿಲ್ಲ. ಕನಿಷ್ಠ ತಡೆಗೋಡೆ ನಿರ್ಮಾಣಕ್ಕೆ ಅನುಮತಿ ಸಿಕ್ಕಿದಲ್ಲಿ ಬಹಳ ಉಪಕರವಾಗುತ್ತಿತ್ತು. ಆದರೇ ನಿನ್ನೆ ದಿನ ಉಡುಪಿ ಆದರ್ಶ ಆಸ್ಪತ್ರೆಗೆ ಸಂಬಂಧಿಕರೋರ್ವರನ್ನು ಕರೆದುಕೊಂಡು ಹೋಗುವಾಗ ಆಸ್ಪತ್ರೆಯ ಮುಂಭಾಗದ ಜಮೀನಿನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದು ಕಂಡು ಬಂದಿದೆ. ಅದು ಕೂಡಾ ಅಲ್ಲಿ ನಡೆಯುತ್ತಿರುವ ಕಾಮಗಾರಿ ಮೊದಲನೇ ಮಹಡಿಯ ಸೆಂಟ್ರಿಂಗ್ ಕೆಲಸ ಆಗಿದ್ದು ಅಲ್ಲಿ ಯಾವುದೇ ರೀತಿಯ ತುರ್ತಿನ ಅಗತ್ಯವಿಲ್ಲ ಅನ್ಸುತ್ತೆ. ಅದೇ ನನ್ನ ಸೈಟಿನಲ್ಲಿ ಮಳೆ ಬಂದರೆ ಅಕ್ಕ ಪಕ್ಕದ ಕಟ್ಟಡಗಳು ಹಾನಿಯಾಗುವ ಸಂಭವವಿದೆ. ಈ ತಾರತಮ್ಯ ಯಾಕೆ.? ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಇದ್ಯಾವ ನ್ಯಾಯ.? ಕನಿಷ್ಠ ಪಕ್ಷ ತಡೆಗೋಡೆ ನಿರ್ಮಾಣಕ್ಕೆ ಅನುಮತಿ ನೀಡಿದ್ದರೆ ಬಹಳ ಉಪಕರವಾಗುತ್ತಿತ್ತು. ಒಂದು ವೇಳೆ ಮಳೆ ಬಂದು ಅಕ್ಕಪಕ್ಕದ ಕಟ್ಟಡಗಳಿಗೆ ಹಾನಿಯಾದರೆ ಸ್ಥಳೀಯ ಅಧಿಕಾರಿಗಳೇ ನೇರ ಹೊಣೆಯಾಗಿರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು..