ರೋಟರಿ ಶಂಕರಪುರ : ಇಂಜಿನಿಯರ್ಸ್ ದಿನಾಚರಣೆ
Thumbnail
ಕಾಪು : ರೋಟರಿ ಕ್ಲಬ್ ಶಂಕರಪುರದ ವತಿಯಿಂದ ಇಂಜಿನಿಯರ್ಸ್ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಇಂಜಿನೀಯರ್ ಗಳಾದ ಅಬ್ದುಲ್ ಖಾದರ್ ಹಾಗೂ ಕ್ಯಾರಲ್ ಡಿಸಿಲ್ವರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದ ಪ್ರಾಯೋಜಕರಾಗಿ ಅನಿತಾ ಡಿಸೋಜರವರು ಸಹಕರಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷರಾದ ಗ್ಲಾಡಸನ್ ಕುಂದರ್, ವೆಲೇರಿಯನ್ ನೊರೋಹ್ನ, ಮಾಲಿನಿ ಶೆಟ್ಟಿ, ಸಿಲ್ವಿಯ ಕಸ್ಟಲೀನೋ, ಅಂತೋನಿ ಡೇಸಾ, ಜಾರ್ಜ್ ಡಿಸಿಲ್ವ, ಪ್ಯಾಟ್ರಿಕ್ ಡಿಸೋಜಾ, ಫ್ಲಾವಿಯ ಮ್ಯಾನೇಜಸ್, ಫ್ರಾನ್ಸಿಸ್ ಡೇಸಾ, ಲಕ್ಷ್ಮಣ್ ಪೂಜಾರಿ, ರೋಟರಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
20 Sep 2022, 10:29 AM
Category: Kaup
Tags: