ಬಿರುವೆರ್‌ ಕಾಪು ಸೇವಾ ಸಮಿತಿ ವತಿಯಿಂದ ಆಟಿ ಕಷಾಯ, ಮೆಂತೆ ಗಂಜಿ ವಿತರಣೆ
Thumbnail

ಕಾಪು : ಆಟಿ ಅಮಾವಾಸ್ಯೆಯ ಪ್ರಯುಕ್ತ ಬಿರುವೆರ್‌ ಕಾಪು ಸೇವಾ ಸಮಿತಿ ವತಿಯಿಂದ ಕಾಪು ಪೇಟೆಯಲ್ಲಿ ಉಚಿತವಾಗಿ ಹಾಳೆ ಮರದ ತೊಗಟೆಯ ಕಷಾಯ ಮತ್ತು ಮೆಂತೆ ಗಂಜಿಯನ್ನು ವಿತರಿಸಲಾಯಿತು. 

ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಂಬಗುಡ್ಡೆ ಅವರ ನೇತೃತ್ವದಲ್ಲಿ ಪರಿಸರದ ವಿವಿಧೆಡೆಗಳಲ್ಲಿ ಹಾಳೆ ಮರದ ತೊಗಟೆಯನ್ನು ಸಂಗ್ರಹಿಸಿ, ಸಾಂಪ್ರದಾಯಿಕ ಶೈಲಿಯಲ್ಲಿ ಸುಮಾರು 150 ಲೀಟರ್‌ನಷ್ಟು ಆಟಿದ ಕಷಾಯವನ್ನು ಸಿದ್ಧಪಡಿಸಿ ಸರ್ವಧರ್ಮೀಯರಿಗೆ ವಿತರಿಸಲಾಯಿತು. 

ಸುಮಾರು 1000 ಕ್ಕೂ ಅಧಿಕ ಮಂದಿ ಕಷಾಯ, ಮೆಂತೆ ಪಾಯಸವನ್ನು ಸ್ವೀಕರಿಸಿದರು. 

ಬಿರುವೆರ್‌ ಕಾಪು ಸೇವಾ ಸಮಿತಿ ಅಧ್ಯಕ್ಷ ಕಾರ್ತಿಕ್ ಅಮೀನ್ ಕಲ್ಲುಗುಡ್ಡೆ, ಪ್ರಧಾನ ಕಾರ್ಯದರ್ಶಿ ಸಂಧ್ಯಾ ಬಾಲಕೃಷ್ಣ ಕೋಟ್ಯಾನ್, ಕೋಶಾಧಿಕಾರಿ ಅಶ್ವಿನಿ ನವೀನ್, ಸದಸ್ಯರಾದ ವಿಕ್ಕಿ ಪೂಜಾರಿ ಮಡುಂಬು, ರಾಕೇಶ್‌ ಕುಂಜೂರು, ಅನಿಲ್‌ ಅಮೀನ್‌ ಕಾಪು, ರವಿರಾಜ್‌ ಇನ್ನಂಜೆ, ಶರತ್ ಪೂಜಾರಿ, ಉದ್ಯಮಿ ಪ್ರಭಾಕರ ಪೂಜಾರಿ ಕೈಪುಂಜಾಲು ಮೊದಲಾದವರು ಉಪಸ್ಥಿತರಿದ್ದರು.

12 Aug 2026, 09:39 PM
Category: Kaup
Tags: