ಲಯನ್ಸ್ ಕ್ಲಬ್ ಬಂಟಕಲ್ ಬಿ.ಸಿ. ರೋಡ್ : ‘ಆಟಿಡೊಂಜಿ ದಿನ’ ಆಚರಣೆ ; ಸೇವಾ ಚಟುವಟಿಕೆ
Thumbnail

ಶಿರ್ವ : ಲಯನ್ಸ್ ಕ್ಲಬ್ ಬಂಟಕಲ್ ಬಿ.ಸಿ. ರೋಡ್ ವತಿಯಿಂದ ಪಡುಬೆಳ್ಳೆಯ ಲಯನ್ ಪೆಲ್ವಿನ್ ಕ್ವಾಡ್ರಸ್ ಅವರ ನಿವಾಸದಲ್ಲಿ ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕವಾಗಿ ಅರ್ಥಪೂರ್ಣವಾದ ‘ಆಟಿಡೊಂಜಿ ದಿನ’ ಕಾರ್ಯಕ್ರಮವನ್ನು ಆಯೋಜಿಸಲಾಯಿತು. 

ಕಾರ್ಯಕ್ರಮವನ್ನು PMJF ಲ. ಹರಿಪ್ರಸಾದ್ ರೈ ಉದ್ಘಾಟಿಸಿ, ಮಾತನಾಡಿದರು. ವಿಶೇಷ ಅತಿಥಿಯಾಗಿ ಆಟಿಡೊಂಜಿ ದಿನದ ಪರಂಪರೆಯ ಕುರಿತು ಲ. ರಾಜೇಶ್ ಜೋಗಿ ಮಾಹಿತಿ ‌ನೀಡಿದರು.

ಸೇವಾ ಚಟುವಟಿಕೆ : MJF ಲ. ಫೆಲಿಕ್ಸ್ ಫೆರ್ನಾಂಡಿಸ್ ಪ್ರಾಯೋಜಿತ ‌ಪಡುಬೆಳ್ಳೆಯ ಆರ್ಥಿಕವಾಗಿ ಹಿಂದುಳಿದ ಕುಟುಂಬವೊಂದಕ್ಕೆ ಅಗತ್ಯ ದಿನಸಿ ಸಾಮಗ್ರಿಗಳನ್ನು ಒಳಗೊಂಡ ರೇಷನ್ ಕಿಟ್ ಅನ್ನು ವಿತರಿಸಲಾಯಿತು.

PMJF ಲ. ಹರಿಪ್ರಸಾದ್ ರೈ ಅವರನ್ನು ಗೌರವಿಸಲಾಯಿತು.

 ಲಯನ್ಸ್ ಕ್ಲಬ್ ಬಂಟಕಲ್ ಬಿ.ಸಿ. ರೋಡ್ ಅಧ್ಯಕ್ಷ ಲಯನ್ ಟೋನಿ ಮೊನಿಸ್, ಕಾರ್ಯದರ್ಶಿ ಲಯನ್ ಪೆಲ್ವಿನ್ ಕ್ವಾಡ್ರಸ್ ಹಾಗೂ ಖಜಾಂಚಿ ಲಯನ್ ಸ್ಯಾಮ್ಸನ್ ನೊರೊನ್ಹಾ ಸೇರಿದಂತೆ ಕ್ಲಬ್‌ನ ಸದಸ್ಯರು ಹಾಗೂ ಅವರ ಕುಟುಂಬದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕ್ಲಬ್ ಅಧ್ಯಕ್ಷ ಲ. ಟೋನಿ ಮೊನಿಸ್ ಸ್ವಾಗತಿಸಿದರು.
ಕಾರ್ಯಕ್ರಮವನ್ನು ಲ. ವಿಜಯ್ ಧೀರಜ್ ಸಂಯೋಜಿಸಿ, ನಿರೂಪಿಸಿದರು. ಕ್ಲಬ್ ಕಾರ್ಯದರ್ಶಿ ಲ. ಪೆಲ್ವಿನ್ ಕ್ವಾಡ್ರಸ್ ವಂದಿಸಿದರು.

ಸುಮಾರು 30 ಬಗೆಯ ವಿಶೇಷ ಸಾಂಪ್ರದಾಯಿಕ ಖಾದ್ಯಗಳನ್ನು ಉಣಬಡಿಸಲಾಯಿತು.

Additional image Additional image Additional image
12 Aug 2026, 10:05 PM
Category: Kaup
Tags: