ಉಡುಪಿ : ಕಾತೀಬೈಲು ಬಬ್ಬು ಸ್ವಾಮಿ ಪರಿವಾರ ದೈವಗಳ ವಾರ್ಷಿಕ ಹರಕೆ ಸೇವೆ
Thumbnail
ಉಡುಪಿ : ಜಿಲ್ಲೆಯಲ್ಲಿ ಸಾವಿರಾರು ವರ್ಷಗಳ ಇತಿಹಾಸವಿರುವ ಹಾವಂಜೆ ಗ್ರಾಮದ ಕೊಳಲಗಿರಿ ಕಾತೀಬೈಲು ಬಬ್ಬು ಸ್ವಾಮಿ ಪರಿವಾರ ದೈವಗಳ ದೈವಸ್ಥಾನದಲ್ಲಿ ವಾರ್ಷಿಕ ಹರಕೆ ಸೇವೆ ಜರಗಿತು. ಈ ಸಂದರ್ಭದಲ್ಲಿ ಪರಿವಾರ ದೈವಗಳಿಗೆ ದರ್ಶನ ಸೇವೆ ಜರಗಿತು. ಗ್ರಾಮದ ಪರ ಊರಿನ ಭಕ್ತಾದಿಗಳು ದೈವದ ಗಂಧ ಪ್ರಸಾದ ಪಡೆದು ದೈವದ ಕೃಪೆಗೆ ಪಾತ್ರರಾದರು. ಗ್ರಾಮದ ಹಿರಿಯರಾದ ಹಾಗೂ ಆಡಳಿತ ಅಧ್ಯಕ್ಷರಾದ ರಮೇಶ್ ಶೆಟ್ಟಿ, ಅಶೋಕ್ ಶೆಟ್ಟಿ, ವಿನೋದ್ ಶೆಟ್ಟಿ ದೊಡ್ಡನಗುಡ್ಡೆ, ಸುರೇಶ್ ಶೆಟ್ಟಿ, ಸುಂದರ ಶೆಟ್ಟಿ, ಮನೋರಂಜನ ಹೆಗ್ಡೆ, ಸಂಜೀವ ಸುವರ್ಣ, ದೋಗು ಪೂಜಾರಿ, ದಾದುಪೂಜಾರಿ, ದೂಮಪೂಜಾರಿ, ತೌಡಪೂಜಾರಿ ಮತ್ತು ಗುರಿಕಾರರು ಹಾಗೂ ಸಮಸ್ತರು, ಆಡಳಿತ ಮಂಡಳಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತಿಯಿದ್ದರು.
27 Nov 2022, 01:00 PM
Category: Kaup
Tags: