ಉಡುಪಿ‌ : ಕೊಡಚಾದ್ರಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ಇದರ ನೂತನ 51 ನೇ ಶಾಖೆ ಉದ್ಘಾಟನೆ ; ಸಾಧಕರಿಗೆ ಸನ್ಮಾನ
Thumbnail

ಉಡುಪಿ : ಕೊಡಚಾದ್ರಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ಇದರ ನೂತನ 51 ನೇ ಶಾಖೆಯು ಪಾಂಡುರಂಗ ಟವರ್  ಫಸ್ಟ್ ಫ್ಲೋರ್ ಡಯಾನ ಸರ್ಕಲ್ ಕೋರ್ಟ್ ರೋಡ್ ಉಡುಪಿ ಇಲ್ಲಿ ಶುಭಾರಂಭಗೊಂಡಿತು.

ಸಮಾಜ ಸೇವಕರಾದ  ನಿತ್ಯಾನಂದ   ಒಳಕಾಡು ಹಾಗೂ ಅಖಿಲ ಭಾರತ ದೈವರಾಧಕರ ಒಕ್ಕೂಟದ (ರಿ.) ಕೇಂದ್ರೀಯ ಉಡುಪಿ ಜಿಲ್ಲೆ ಸಂಸ್ಥಾಪಕ ಅಧ್ಯಕ್ಷರಾದ  ಹಾಗೂ ವಿಎಸ್ ಗ್ರೂಪ್ ನಮ್ಮ ಉಡುಪಿ  ಟಿವಿ  ನಿರ್ದೇಶಕರು, ತುಳುನಾಡು ವಾರ್ತೆ ವರದಿಗಾರರಾದ ವಿನೋದ್ ಶೆಟ್ಟಿ, ಜಹೀರ್ ಅಲಿ,  ರಂಜಿತಾ ಶೇಟ್ ಜೊತೆಗೂಡಿ ಉದ್ಘಾಟಿಸಿದರು.

ಸನ್ಮಾನ‌ : ಸದಾ ಸಮಾಜ ಸೇವೆಯಲ್ಲಿ ಸಕ್ರಿಯರಾಗಿರುವ ನಿತ್ಯಾನಂದ ಒಳಕಾಡುರವರಿಗೆ ಹಾಗೂ 
ಸಮಾಜ ಸೇವೆ, ದೈವಾರಾಧನೆ ಕ್ಷೇತ್ರ, ಸಹಕಾರಿ ಕ್ಷೇತ್ರ, ಮಾಧ್ಯಮ ಕ್ಷೇತ್ರ, ಧಾರ್ಮಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗೆ, ಬೆಂಗಳೂರಿನಲ್ಲಿ  ರಾಷ್ಟ್ರೀಯ ಹಾಗೂ ರಾಜ್ಯೋತ್ಸವ ಪ್ರಶಸ್ತಿ  ಪುರಸ್ಕರಾದ ವಿನೋದ್ ಶೆಟ್ಟಿವರಿಗೆ  ಹಾಗೂ ರಂಜಿತಾ ಶೇಟ್, ಜಹೀರ್ ಅಲಿ ಮತ್ತಿತರ ಪ್ರಮುಖ ಸಾಧಕರಿಗೆ ಸಂಸ್ಥೆಯ ವತಿಯಿಂದ  ಸನ್ಮಾನಿಸಲಾಯಿತು. 

 ಈ ಸಂದರ್ಭದಲ್ಲಿ ಸುಷ್ಮಾ ಬಂಟ್ವಾಳ, ಆಪೋಲಿನ ಡಿಸಿಲ್ವಾ, ಸುಶಾಂತ್, ಸೀನಿಯರ್ ಮ್ಯಾನೇಜರ್ ವಿರೇಶ್ ಬಿ ಸ್, ಉಡುಪಿ ಬ್ರಾಂಚ್ ಮ್ಯಾನೇಜರ್ ರೋಯಿಸ್ ಡಿಸಿಲ್ವಾ, ಹಾಗೂ ಅಸಿಸ್ಟೆಂಟ್ ಮ್ಯಾನೇಜರ್ ಸುಭಾಷ್, 
ಸಿಬ್ಬಂದಿ ವರ್ಗ ಉಪಸ್ಥಿತಿಯಿದ್ದರು.

08 Feb 2026, 11:18 PM
Category: Kaup
Tags: