ದುಪ್ಪಟ್ಟು ಟೋಲ್ ವಿಧಿಸುವ ಕ್ರಮ ಸರಿಯಲ್ಲ : ಸಮಾಜ ಸೇವಕ ಫಾರೂಕ್ ಚಂದ್ರನಗರ
Thumbnail
ಕಾಪು : ಹೆಜಮಾಡಿಯಲ್ಲಿ ಡಿಸೆಂಬರ್ 01 ರಿಂದ ದುಪ್ಪಟ್ಟು ಟೋಲ್ ವಿಧಿಸುವ ಕ್ರಮ ಸರಿಯಲ್ಲ ಜನಸಾಮಾನ್ಯರು ಈಗಾಗಲೇ ಹೆಚ್ಚುತ್ತಿರುವ ದಿನಬಳಕೆ ವಸ್ತು ಡೀಸೆಲ್, ಪೆಟ್ರೋಲ್ ನಿಂದ ಕಂಗೆಟ್ಟಿದ್ದಾರೆ. ಕರೋಣದಂತ ಮಹಾ ಮಾರಿಯಿಂದ ಈಗ ವ್ಯಪಾರ ವ್ಯವಹಾರ ಚೇತರಿಕೆ ಸಂದರ್ಭದಲ್ಲಿ ಜನರ ಮೇಲೆ ಟೋಲ್ ದುಪ್ಪಟ್ಟು ಮಾಡಿ ಕಾಪು, ಪಡುಬಿದ್ರಿ, ಮುಲ್ಕಿ ಹತ್ತಿರದ ಜನರಿಗೆ ತುಂಬಾನೇ ಕಷ್ಟಕರ ಪರಿಸ್ಥಿತಿ ಎದುರಾಗುತ್ತದೆ. ಕೇಂದ್ರ ಸರಕಾರ ಕೂಡಲೇ ಇದನ್ನು ಮನಗಂಡು ಈ ಮೊದಲು ನಿಗದಿಪಡಿಸಿದ್ದ ದರವನ್ನೆ ಮುಂದುವರೆಸಿ ಜನಸಾಮಾನ್ಯರಿಗೆ ಸಹಕರಿಸಬೇಕೆಂದು ಸಮಾಜ ಸೇವಕ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಫಾರೂಕ್ ಚಂದ್ರನಗರ ಆಗ್ರಹಿಸಿದ್ದಾರೆ.
30 Nov 2022, 05:29 PM
Category: Kaup
Tags: