ಉಡುಪಿ : ಟೋಲ್ ಗೇಟ್ - ಸಮಾನ ಮನಸ್ಕರ ಸಭೆ ; ಅಧ್ಯಾದೇಶದ ವಾಪಾಸಿಗೆ ಧರಣಿಯ ತೀರ್ಮಾನ
Thumbnail
ಉಡುಪಿ : ಸುರತ್ಕಲ್ ನಿಂದ ತೆರವುಗೊಳಿಸಿರುವ ಅಕ್ರಮ ಟೋಲ್ ಗೇಟ್ ಅನ್ನು ಹೆಜಮಾಡಿ ಟೋಲ್ ಗೇಟ್ ನಲ್ಲಿ ವಿಲೀನಗೊಳಿಸಿ ಸುರತ್ಕಲ್ ಟೋಲ್ ಸುಂಕವನ್ನು ಹೆಜಮಾಡಿ ಟೋಲ್ ಗೇಟ್ ನಲ್ಲಿ ಸಂಗ್ರಹಿಸುವ ಹೆದ್ದಾರಿ ಪ್ರಾಧಿಕಾರದ ಆದ್ಯಾದೇಶ ಜಾರಿಗೊಳಿಸಲು ತೆರೆಮರೆಯಲ್ಲಿ ಪ್ರಯತ್ನಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ನಡೆಸಬೇಕಾದ ಹೋರಾಟದ ಕುರಿತು ಚರ್ಚಿಸಲು ಉಡುಪಿ ಅಜ್ಜರಕಾಡಿನಲ್ಲಿ ಇಂದು ಸಮಾನ ಮನಸ್ಕ ಸಂಘಟನೆಗಳ ಸಭೆ ನಡೆಯಿತು. ವಿನಯ ಕುಮಾರ್ ಸೊರಕೆ, ಮುನೀರ್ ಕಾಟಿಪಳ್ಳ, ಅಭಯ ಚಂದ್ರ ಜೈನ್, ಬಾಲಕೃಷ್ಣ ಶೆಟ್ಟಿ, ಎಮ್ ಜಿ ಹೆಗ್ಢೆ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಶೇಖರ ಹೆಜಮಾಡಿ, ರಮೇಶ್ ಕಾಂಚನ್, ನವೀನ್ ಚಂದ್ರ ಶೆಟ್ಟಿ ,ಸುಂದರ ಮಾಸ್ತರ್, ನೇರ್ಗಿ, ರಾಲ್ಫಿ ಡಿ ಕೋಸ್ತ, ಫಣಿರಾಜ್, ಸುರೇಶ್ ಕಲ್ಲಾಗರ, ರಮೀಜ್ ಪಡುಬಿದ್ರೆ, ಧೀರಜ್, ಸುಧೀರ್ ಕರ್ಕೇರ, ಸುಭಾಷ್ ಸಾಲ್ಯಾನ್, ಶೇಕಬ್ಬ ಕೋಟೆ, ಇಬ್ರಹಿಮ್ ಸನ ,ಯತೀಶ್ ಕರ್ಕೇರಾ ಸಹಿತ ಉಡುಪಿ ಯ ಹಲವು ಸಂಘಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು. ಮುಂದೆ ನಡೆಸಬೇಕಾದ ಹೋರಾಟಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು. ಡಿಸೆಂಬರ್ 29 ರಂದು ಉಡುಪಿಯಲ್ಲಿ ಅಧ್ಯಾದೇಶದ ವಾಪಾಸು ಪಡೆಯಿರಿ ಎಂಬ ಬೇಡಿಕೆಯಡಿ ಸಾಮೂಹಿಕ ಧರಣಿ ನಡೆಸಲು ತೀರ್ಮಾನಿಸಲಾಯಿತು.
Additional image
14 Dec 2022, 10:01 PM
Category: Kaup
Tags: