ಎರ್ಮಾಳು : ಶ್ರೀ ಲಕ್ಷ್ಮಿ ಜನಾರ್ಧನ ದೇಗುಲದ ರಥೋತ್ಸವದ ಪ್ರಯುಕ್ತ ಧ್ವಜಾರೋಹಣ
Thumbnail
ಎರ್ಮಾಳು : ಪುರಾಣ ಪ್ರಸಿದ್ಧ ಎರ್ಮಾಳು ಶ್ರೀ ಲಕ್ಷ್ಮಿ ಜನಾರ್ಧನ ದೇಗುಲದಲ್ಲಿ ಶುಕ್ರವಾರ ಬೆಳಗ್ಗೆ ವಾರ್ಷಿಕ ರಥೋತ್ಸವದ ಪ್ರಯುಕ್ತ ಧ್ವಜಾರೋಹಣ ನೆರವೇರಿತು. ಧ್ವಜಾರೋಹಣದ ಪ್ರಯುಕ್ತ ಬಲಿ ಸೇವೆ, ಮಹಿಳಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನೆರವೇರಿತು. ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನೆರವೇರಿತು. ದೇವಳದ ವಾರ್ಷಿಕ ಜಾತ್ರೋತ್ಸವವು ಡಿಸೆಂಬರ್ 20ರ ಮಂಗಳವಾರ ನೆರವೇರಲಿದೆ. ಈ ಸಂದರ್ಭ ದೇವಳದ ತಂತ್ರಿ ವರ್ಯರಾದ ರಾಧಾಕೃಷ್ಣ ತಂತ್ರಿ, ಪ್ರಧಾನ ಅರ್ಚಕ ಕೃಷ್ಣಮೂರ್ತಿ ಭಟ್‌, ಅನುವಂಶೀಯ ಮೊಕ್ತೇಸರ ಅಶೋಕ್‌ ರಾಜ್‌ ಎರ್ಮಾಳು, ಶಂಕರ ಶೆಟ್ಟಿ ಎರ್ಮಾಳು, ನೈಮಾಡಿ ನಾರಾಯಣ ಶೆಟ್ಟಿ, ಎರ್ಮಾಳು ರೋಹಿತ್‌ ಹೆಗ್ಡೆ, ಉದಯ ಕೆ ಶೆಟ್ಟಿ ಎರ್ಮಾಳು, ಕಿಶೋರ್‌ ಶೆಟ್ಟಿ ಎರ್ಮಾಳು, ಸಂತೋಷ್‌ ಶೆಟ್ಟಿ ಬರ್ಪಾಣಿ ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.
Additional image
16 Dec 2022, 06:26 PM
Category: Kaup
Tags: