ಇನ್ನಂಜೆ : ಅಪರಾಧ ತಡೆ ಮಾಸಾಚರಣೆ ಮಾಹಿತಿ ಕಾರ್ಯಕ್ರಮ
ಇನ್ನಂಜೆ : ಜೆಸಿಐ ಶಂಕರಪುರ ಜಾಸ್ಮಿನ್, ಕಾಪು ಪೊಲೀಸ್ ಠಾಣೆ ಮತ್ತು ಯಸ್ ವಿ ಎಚ್ ಪ್ರೌಢಶಾಲೆ ಇನ್ನಂಜೆ ಇವರ ಜಂಟಿ ಆಶ್ರಯದಲ್ಲಿ ಅಪರಾಧ ತಡೆ ಮಾಸಾಚರಣೆ ಮಾಹಿತಿ ಕಾರ್ಯಕ್ರಮವು ಇನ್ನಂಜೆ ದಾಸ ಭವನದಲ್ಲಿ ಜರುಗಿತು.
ಕಾರ್ಯಕ್ರಮವನ್ನು ದೈಹಿಕಶಿಕ್ಷಕ ನವೀನ್ ಶೆಟ್ಟಿ ಉದ್ಘಾಟಿಸಿದರು. ಕಾಪು ಠಾಣಾಧಿಕಾರಿಯಯಾದ ಶ್ರೀಶೈಲ ಮುರಗೋಡ ಮಾಹಿತಿಯನ್ನು ನೀಡಿದರು.
ಜೆಸಿಐ ಶಂಕರಪುರ ನಿಕಟಪೂರ್ವ ಅಧ್ಯಕ್ಷ ಜಗದೀಶ್ ಅಮೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೂರ್ವ ವಲಯ ಉಪಾಧ್ಯಕ್ಷ ಸಂತೋಷ್ ಕುಮಾರ್ ಪ್ರಾಸ್ತಾವಿಕವಾಗಿ
ಮಾತನಾಡಿದರು. ಪ್ರಶಾಂತ್ ಶೆಟ್ಟಿ ಅತಿಥಿಗಳನ್ನು ವೇದಿಕೆಗೆ ಬರಮಾಡಿಕೊಂಡರು. ಸಿಲ್ವಿಯಾ ಕಾಸ್ಟಲಿನೋ ಜೆಸಿ ವಾಣಿ ವಾಚಿಸಿದರು. ಜೆಸಿಐ ಶಂಕರಪುರ ಅಧ್ಯಕ್ಷರಾದ ಮಾಲಿನಿ ಪಾರ್ಥ ಇನ್ನಂಜೆ ಸ್ವಾಗತಿಸಿದರು. ಶಾಲೆಯ ಅಧ್ಯಾಪಕ ಪ್ರಭಾಕರ್ ಭಟ್ ವಂದಿಸಿದರು.
