ಜನವರಿ 7, 8 : ಮಹಾದೇವಿ ಫ್ರೆಂಡ್ಸ್ ಕಾಪು ಆಶ್ರಯದಲ್ಲಿ 40 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟ ; ಸಮ್ಮಾನ
Thumbnail
ಕಾಪು‌ : ಮಹಾದೇವಿ ಫ್ರೆಂಡ್ಸ್, ಕಾಪು ಇವರ ಆಶ್ರಯದಲ್ಲಿ 4ನೇ ವರ್ಷದ 40 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟ ಮಹಾದೇವಿ ಟ್ರೋಫಿ - 2023 ಜನವರಿ 7, ಶನಿವಾರ ಮತ್ತು 8 ,ಆದಿತ್ಯವಾರ ಮಹಾದೇವಿ ಶಾಲಾ ಕ್ರೀಡಾಂಗಣ, ಕಾಪು ಇಲ್ಲಿ ಜರಗಲಿದೆ. ಪ್ರಥಮ ಬಹುಮಾನವಾಗಿ ₹ 50,555 ಹಾಗೂ ಮಹಾದೇವಿ ಟ್ರೋಫಿ ಮತ್ತು ದ್ವಿತೀಯ ಬಹುಮಾನವಾಗಿ ₹ 25,555 ಹಾಗೂ ಮಹಾದೇವಿ ಟ್ರೋಫಿ ಸಿಗಲಿದೆ. ಲೀಗ್ ಮಾದರಿಯ 12 ಟೀಮ್‌ಗಳ ಪಂದ್ಯಾಕೂಟ ಜನವರಿ 7, ಶನಿವಾರ ಮಧ್ಯಾಹ್ನ ಗಂಟೆ 2 ರಿಂದ ಪ್ರಾರಂಭ. ಮುಕ್ತ ಪಂದ್ಯಾಕೂಟ ಜನವರಿ 7, ಶನಿವಾರ ರಾತ್ರಿ ಗಂಟೆ 10 ರಿಂದ ಪ್ರಾರಂಭವಾಗಲಿದೆ. ಸಮ್ಮಾನ‌ : 2022ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುಡ್ಡ ಪಾಣಾರ, 2022ನೇ ಸಾಲಿನಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಟ್ರಿಂಗ್ ಆಟ್೯ ನಲ್ಲಿ ಸಾಧನೆಗೈದಿರುವ ಶಶಾಂಕ್ ಸಾಲ್ಯಾನ್, 2022ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಕಾಪು ತಾಲೂಕಿನಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುವ ರಕ್ಷಣ್ ಕಲ್ಯಾ ಇವರ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಸಮ್ಮಾನಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಸುಶಾಂತ್ 7795160058, ಮಾಧವ ಪೂಜಾರಿ 7899065890, ಜಗದೀಶ್ 8123431411
16 Dec 2022, 10:47 PM
Category: Kaup
Tags: