ಬಿಲ್ಲವ, ಈಡಿಗ, ನಾಮಧಾರಿ ಸೇರಿದಂತೆ 26 ಪಂಗಡಗಳ ಬೇಡಿಕೆ ಈಡೇರಿಕೆಗಾಗಿ ಪಾದಯಾತ್ರೆ ; ಆಮಂತ್ರಣ ಪತ್ರಿಕೆ ಬಿಡುಗಡೆ
Thumbnail
ಕಟಪಾಡಿ : ಬಿಲ್ಲವ ಈಡಿಗ ನಾಮಧಾರಿ ಸೇರಿದಂತೆ 26 ಪಂಗಡಗಳ ಬೇಡಿಕೆಗಳ ಈಡೇರಿಕೆಗಾಗಿ ಕಲ್ಬುರ್ಗಿಯ ಬ್ರಹ್ಮಶ್ರೀ ನಾರಾಯಣ ಗುರು ಪೀಠದ ಶ್ರೀ ಶ್ರೀ ಪ್ರಣವಾನಂದ ಸ್ವಾಮೀಜಿ ಮತ್ತು ಸಮಾಜ ಭಾಂದವರ ನೇತೃತ್ವದಲ್ಲಿ ಜನವರಿ 06 ರಂದು ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಬೆಂಗಳೂರಿನ ವಿಧಾನ ಸೌಧದ ವರೆಗೆ ನಡೆಯುವ ಐತಿಹಾಸಿಕ ಪಾದಯಾತ್ರೆಯ ಉಡುಪಿ ಜಿಲ್ಲಾ ಸಮಿತಿಯ ಆಮಂತ್ರಣ ಪತ್ರಿಕೆಯನ್ನು ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಸಮಾಜದ ಹಿರಿಯರಾದ ಸುಧಾಕರ ಪೂಜಾರಿ ಪಾಂಗಳ ಬಿಡುಗಡೆಗೊಳಿಸಿದರು. ಈ ಸಂಧರ್ಭದಲ್ಲಿ ಐತಿಹಾಸಿಕ ಪಾದಯಾತ್ರೆ ಸಮಿತಿಯ ಗೌರವಾಧ್ಯಕ್ಷರಾದ ಉಮೇಶ್ ಪೂಜಾರಿ ಕೇಂಜ, ಮಾಧವ ಬನ್ನಂಜೆ, ರಾಮ ಟಿ. ಪೂಜಾರಿ ಸಂತೆಕಟ್ಟೆ, ಶಶಿಧರ ಮಲ್ಪೆ, ಪ್ರಭಾಕರ್ ಆರ್. ಸಾಲ್ಯಾನ್, ಸದಾನಂದ ನಾಯಗರ್, ದಿವಾಕರ ಸನಿಲ್, ಜಿಲ್ಲಾ ಸಮಿತಿಯ ಅಧ್ಯಕ್ಷರಾದ ರಾಘವೇಂದ್ರ ಕೆ. ಅಮೀನ್, ಕಾರ್ಯಧ್ಯಕ್ಷರಾದ ಪ್ರವೀಣ್ ಎಂ. ಪೂಜಾರಿ, ಸಂಚಾಲಕರಾದ ವಿಶುಕುಮಾರ್ ಸುವರ್ಣ ಕಲ್ಯಾಣಪುರ, ಚಲನ ಚಿತ್ರ ನಟ ನಿರ್ದೇಶಕ ಸೂರ್ಯೋದಯ ಪೆರಂಪಳ್ಳಿ, ಕ್ಷೇತ್ರದ ಕಾರ್ಯದರ್ಶಿ ಶಿವಾನಂದ ಪೂಜಾರಿ, ಹರೀಶ್ ಕರ್ಕೇರ, ಚಂದ್ರ ಪೂಜಾರಿ, ಶಂಕರ್ ಪೂಜಾರಿ,ಶಿವಪ್ರಸಾದ್ ಪಾಲನ್ ಬೆಂಗ್ರೆ ಸಂತೋಷ್ ಜತ್ತನ್,ಬಾಲರಾಜ್ ಕೆಮ್ಮಣ್ಣು, ದಾಮೋದರ ಜತ್ತನ್ ಹೂಡೆ, ಉದಯ ಪೂಜಾರಿ ಕಂಡಾಳ, ಸಂಜಯ್ ಪೂಜಾರಿ,ಪ್ರವೀಣ್ ಪೂಜಾರಿ ಕುತ್ಯಾರ್, ಶರತ್ ಜತ್ತನ್, ಉದಯ ಸನಿಲ್ ಮತ್ತಿತ್ತರರು ಉಪಸ್ಥಿತರಿದ್ದರು.
Additional image
27 Dec 2022, 05:22 PM
Category: Kaup
Tags: