ಜನವರಿ 6 : ಕಲ್ಯಾಲು ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನ, ಇನ್ನಂಜೆ - ಕಾಲಾವಧಿ ನೇಮೋತ್ಸವ
Thumbnail
ಕಾಪು : ತಾಲೂಕಿನ ಕಲ್ಯಾಲು ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನ, ಇನ್ನಂಜೆ ಇಲ್ಲಿನ ಕಾಲಾವಧಿ ನೇಮೋತ್ಸವ ಜನವರಿ 6, ಶುಕ್ರವಾರ ಜರಗಲಿದೆ. ಬೆಳಿಗ್ಗೆ ಗಂಟೆ 8ಕ್ಕೆ ದೇವರ ಪ್ರಾರ್ಥನೆ, ಬೆಳಿಗ್ಗೆ ಗಂಟೆ 10ಕ್ಕೆ ನವಕ ಪ್ರಾಧನ ಹೋಮ ಕಲಶಾಭಿಷೇಕ, ಮಹಾಪೂಜೆ, ನಾಗತಂಬಿಲ, ಮಧ್ಯಾಹ್ನ ಗಂಟೆ 11.15ಕ್ಕೆ ತೋರಣ ಮೂಹೂರ್ತ, ಮಧ್ಯಾಹ್ನ 1ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಗಂಟೆ 6ಕ್ಕೆ ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಪ್ರಸಾದ ಆಗಮನ, ರಾತ್ರಿ ಗಂಟೆ 9.30ಕ್ಕೆ ಭಂಡಾರ ಇಳಿಯುವುದು ಮತ್ತು ಕಾಲಾವಧಿ ನೇಮೋತ್ಸವ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
29 Dec 2022, 02:30 PM
Category: Kaup
Tags: