ಪಡುಬಿದ್ರಿ : ಕುಣಿತ ಭಜನಾ ಸ್ಪರ್ಧೆ - ಕುಣಿದು ಭಜಿಸಿರೋ - 2023 ಸಂಪನ್ನ
Thumbnail
ಪಡುಬಿದ್ರಿ : ಇಲ್ಲಿನ ಕಂಚಿನಡ್ಕದ ಶ್ರೀಸತ್ಯದೇವಿ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ವತಿಯಿಂದ 28ನೇ ವರ್ಷದ ಮಹಾಪೂಜೆಯ ಅಂಗವಾಗಿ ಆಯೋಜಿಸಲಾದ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆ "ಕುಣಿದು ಭಜಿಸಿರೋ - 2023" ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪಡುಬಿದ್ರಿ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದ ನಾಗಪಾತ್ರಿ ಸುರೇಶ್ ಭಟ್ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ಶಾಸಕ ಲಾಲಾಜಿ.ಆರ್.ಮೆಂಡನ್, ಸುದರ್ಶನ್ ಎಂ ಮೂಡುಬಿದಿರೆ, ಗೀತಾಂಜಲಿ ಸುವರ್ಣ, ಶ್ರೀಕಾಂತ್ ನಾಯಕ್, ರವಿ ಶೆಟ್ಟಿ ಪಾದೆಬೆಟ್ಟು, ಗಾಯತ್ರಿ ಪ್ರಭು, ಸೌಮ್ಯಲತಾ ಶೆಟ್ಟಿ, ಕು.ಯಶೋದ, ಧಾರ್ಮಿಕ ಮುಖಂಡರಾದ ವಿಷ್ಣುಮೂರ್ತಿ ಆಚಾರ್ಯ, ಪ್ರಶಾಂತ್ ಶೆಣೈ, ಬಾಬು ಕೋಟ್ಯಾನ್, ಭಾಸ್ಕರ್ ಪಂಬದ, ಸುಧಾಕರ ಪಾತ್ರಿ, ರಾಜೇಂದ್ರ ಶೆಣೈ, ಶಶಿಧರ್ ಹೆಗ್ಡೆ ಅಡ್ವೆ, ಯುವರಾಜ್ ಕುಲಾಲ್, ಚಂದ್ರಹಾಸ ಭಂಡಾರಿ, ರಾಜೇಶ್ ಕೋಟ್ಯಾನ್, ರಾಜೇಶ್ ಉಚ್ಚಿಲ ಆಗಮಿಸಿ ಶುಭಹಾರೈಸಿದರು. ಸಮಾರೋಪ : ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಪೂಜ್ಯ ಕೇಮಾರು ಶ್ರೀಗಳಾದ ಶ್ರೀಶ್ರೀಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಮಿಥುನ್.ಆರ್.ಹೆಗ್ಡೆ, ಯಶಪಾಲ್.ಎ.ಸುವರ್ಣ, ಸುರೇಶ್ ಶೆಟ್ಟಿ ಗುರ್ಮೆ, ಶ್ರೀಶ ನಾಯಕ್ ಪೆರ್ಣಂಕಿಲ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ನವೀನಚಂದ್ರ.ಜೆ.ಶೆಟ್ಟಿ, ನವೀನ್ ಶೆಟ್ಟಿ, ಜಯಕರ್ ಐರೋಡಿ, ಗೀತಾ ಅರುಣ್, ಕೃಷ್ಣ ಗುರುಸ್ವಾಮಿ, ಶಿವಪ್ಪ ಕಂಚಿನಡ್ಕ ಮೊದಲಾದವರು ಉಪಸ್ಥಿತರಿದ್ದರು. ಕುಣಿತ ಭಜನಾ ಸ್ಪರ್ಧೆಯಲ್ಲಿ ಒಟ್ಟು 13 ತಂಡಗಳು ಭಾಗವಹಿಸಿದ್ದು,ಪ್ರಥಮ ಬಹುಮಾನವನ್ನು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಸಿರಿಬೈಲ್ ಕಡ್ತಲ, ದ್ವಿತೀಯ ಬಹುಮಾನವನ್ನು ಬಾಲ ವಿಕಾಸ ಭಜನಾ ಮಂಡಳಿ ಹೊಸಬೆಟ್ಟು, ತೃತೀಯ ಬಹುಮಾನ - ಆಂಜನೇಯ ಭಜನಾ ಮಂಡಳಿ ಸಾಣೂರು ಕಾರ್ಕಳ ಹಾಗೂ ಸಮಾಧಾನಕರ ಬಹುಮಾನವನ್ನು ಶ್ರೀ ದುರ್ಗಾ ಭಜನಾ ಮಂಡಳಿ ಮುದರಂಗಡಿ ಮತ್ತು ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿ ಗುರಿಪಳ್ಳ ಉಜಿರೆ ಪಡೆದುಕೊಂಡರು.
Additional image Additional image Additional image
03 Jan 2023, 10:33 AM
Category: Kaup
Tags: