ಕೊರೊನ ಮಹಾಮಾರಿ ತೊಲಗಲು ಪಾದಯಾತ್ರೆ ಕೈಗೊಂಡ ವಿಶ್ವ ಕಲ್ಲಟ್ಟೆ (ಈಚು ಸ್ವಾಮಿ)
Thumbnail
ಪಡುಬಿದ್ರಿ : ಹಲವು ವರ್ಷಗಳಿಂದ ಅಯ್ಯಪ್ಪ ಮಾಲಾಧಾರಿಯಾಗಿ ಪಾದಯಾತ್ರೆಯ ಮೂಲಕ ಕ್ಷೇತ್ರ ದರ್ಶನ ಮಾಡುತ್ತಿರುವ ಪಡುಬಿದ್ರಿಯ ವಿಶ್ವ ಕಲ್ಲಟ್ಟೆ (ಈಚು ಸ್ವಾಮಿ) ಈ ಬಾರಿಯು ಪಾದಯಾತ್ರೆ ಕೈಗೊಂಡಿದ್ದಾರೆ. ಅದರಲ್ಲೇನು ವಿಶೇಷ ಅಂದುಕೊಳ್ಳಬಹುದು ಹೌದು ವಿಶೇಷವಿದೆ. ಕೊರೊನದ ಸಂದಿಗ್ಧ ಪರಿಸ್ಥಿತಿಯಲ್ಲಿ ಮಹಾಮಾರಿ ತೊಲಗಲು ಶಬರಿಮಲೆ ಕ್ಷೇತ್ರಕ್ಕೆ ತುಪ್ಪದ ಅಭಿಷೇಕವನ್ನು ಪಾದಯಾತ್ರೆಯ ಹರಕೆ ಹೊತ್ತಿದ್ದರು. ಆದರೆ ಶಬರಿಮಲೆಗೆ ಪಾದಯಾತ್ರೆ ಅಂದು ನಿಷಿದ್ಧವಿದ್ದರಿಂದ ಈ ಸೇವೆ ಮಾಡಲು ವಿಳಂಬವಾಯಿತು. ಈ ಬಾರಿ ಹರಕೆ ಪೂರೈಸುವ ನಿಟ್ಟಿನಲ್ಲಿ ಪಾದಯಾತ್ರೆ ಆರಂಭಿಸಿದ್ದಾರೆ. ಇದಕ್ಕೂ ಮೊದಲು ವಿಶ್ವ ಕಲ್ಲಟ್ಟೆ ( ಈಚು ಸ್ವಾಮಿ) ನರೇಂದ್ರ ಮೋದಿ ದೇಶದ ಪ್ರಧಾನಿಯಾಗಲು ಪಾದಯಾತ್ರೆ ಹರಕೆ ಹೊತ್ತಿದ್ದರು. ಸಾಮಾಜಿಕ ಸೇವಾ ಸಂಸ್ಥೆ ಪಡುಬಿದ್ರಿ ಭಗವತಿ ಗ್ರೂಪ್ ಇದರ ಸದಸ್ಯನಾಗಿದ್ದಾರೆ. ತನ್ನ ಒಳಿತಿಗಾಗಿ ದೇವರ ಮೊರೆ ಹೋಗುವ ಕಾಲಘಟ್ಟದಲ್ಲಿ ಸರ್ವರ ಒಳಿತಿಗಾಗಿ ವಿಶ್ವ ಕಲ್ಲಟ್ಟೆ (ಈಚು ಸ್ವಾಮಿ)ಯವರು ಕೈಗೊಂಡ ಪಾದಯಾತ್ರೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
04 Jan 2023, 11:23 PM
Category: Kaup
Tags: