ಜ. 7 : ಚಂದ್ರಹಾಸ ಗುರುಸ್ವಾಮಿ ಇನ್ನಂಜೆಯವರ ಶ್ರೀ ಅಯ್ಯಪ್ಪ ಭಕ್ತವೃಂದ ಶಂಕರಪುರದ 37ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ
Thumbnail
ಕಾಪು : ಮುಂಬೈ ಮಹಾನಗರದಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾಗಿ ಗುರುತಿಸಿಕೊಂಡು, ಧಾರ್ಮಿಕ ಶೈಕ್ಷಣಿಕ ಸೇವೆಗಳಿಗೆ ತನ್ನ ಬದುಕನ್ನು ಮುಡುಪಾಗಿಟ್ಟದ್ದು ಕಳೆದ 37 ವರ್ಷಗಳಿಂದ ಕಲಿಯುಗ ವರದ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಕಟ್ಟುನಿಟ್ಟಿನ ವೃತ್ತವನ್ನು ಮಾಡಿ ಶಬರಿಮಲೆ ಯಾತ್ರೆಯನ್ನು ಕೈಗೊಳ್ಳುತ್ತಾ ಬಂದಿರುವ ಶಂಕರಪುರ, ಇನ್ನಂಜೆ ಯಲ್ಲಿ 37 ಹಾಗೂ ಮುಂಬಯಿ, ಅಂಧೇರಿ ಪರಿಸರದಲ್ಲಿ 33 ವರ್ಷಗಳ ಹಿಂದೆ ಶ್ರೀ ಅಯ್ಯಪ್ಪ ಭಕ್ತವೃಂದ ಸೇವಾ ಸಮಿತಿ ಸ್ಥಾಪಿಸಿ ಅಯ್ಯಪ್ಪ ಮಹಾಪೂಜೆಯನ್ನು ನಡೆಸುತ್ತಾ ಸಾವಿರಾರು ಅಯ್ಯಪ್ಪ ಸ್ವಾಮಿಯ ಭಕ್ತರಿಗೆ ಅನುದಾನವನ್ನು ನೀಡುತ್ತಾ ಬಂದಿರುವ ಇನ್ನಂಜೆ ಚಂದ್ರ ಗುರುಸ್ವಾಮಿ ಅವರ ಈ ವರ್ಷದ 37 ನೇ ಶ್ರೀ ಅಯ್ಯಪ್ಪ ಮಹಾಪೂಜೆ ಜನವರಿ 7 ರಂದು ಶನಿವಾರ ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಇನ್ನಂಜೆಯಲ್ಲಿ ನಡೆಯಲಿದೆ ಆ ಪ್ರಯುಕ್ತ ಜನವರಿ 6 ರ ಶುಕ್ರವಾರ ಸಂಜೆ 5 ಗಂಟೆಗೆ ಅಯ್ಯಪ್ಪ ಶಿಬಿರ ದಿಂದ ದೇವಸ್ಥಾನಕ್ಕೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.ಜನವರಿ 7 ರ ಶನಿವಾರ ಬೆಳಿಗ್ಗೆ 5.00 ಕ್ಕೆ ಶರಣುಘೋಷ ಮತ್ತು ನಿತ್ಯ ಪೂಜೆ ಬೆಳಿಗ್ಗೆ 6 ರಿಂದ ಮಹಾಗಣಪತಿ ಹೋಮ ಬೆಳಿಗ್ಗೆ 11 ರಿಂದ ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮಹಾಪೂಜೆ, ಆ ಬಳಿಕ ಮಹಾಪ್ರಸಾದ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ಗಂಟೆಗೆ ವಿಶೇಷ ಹೂವಿನ ಪೂಜೆಯ ನಂತರ ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಅಯ್ಯಪ್ಪ ಶಿಬಿರದ ವರಗೆ ವಿಶೇಷ ಮೆರವಣಿಗೆ ನಡೆದು, ರಾತ್ರಿ 8 ಗಂಟೆಗೆ ಚಂದ್ರಹಾಸ ಗುರುಸ್ವಾಮಿಯವರ ನೇತೃತ್ವದಲ್ಲಿ ಪಡಿಪೂಜೆ ಹಾಗೂ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ಗಂಟೆ 9 ಕ್ಕೆ ಕಿನ್ನಿಗೋಳಿ ವಿಜಯಾ ಕಲಾವಿದರಿಂದ ಧಾರ್ಮಿಕ ಸ್ಪರ್ಶದ ಸಾಂಸ್ಕೃತಿಕ ನಾಟಕ "ಪಂಚ ಜೀಟಿಗೆ" ಪ್ರದರ್ಶನ ಗೊಳ್ಳಲಿದೆ. ಜನವರಿ 10 ರಂದು ಬೆಳಿಗ್ಗೆ 8 ಗಂಟೆಗೆ ಶಿಬಿರದಲ್ಲಿ ಇರುಮುಡಿ ಕಟ್ಟುವ ಕಾರ್ಯಕ್ರಮ ಇದೆ. ಭಕ್ತಾದಿಗಳೆಲ್ಲರೂ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಶ್ರೀ ಅಯ್ಯಪ್ಪ ಸ್ವಾಮಿಯ ಹಾಗೂ ಶ್ರೀ ವಿಷ್ಣುಮೂರ್ತಿ ದೇವರ ಮಹಾಪ್ರಸಾದ ಅನ್ನದಾನವನ್ನು ಸ್ವೀಕರಿಸಬೇಕೆಂದು ಸಂಸ್ಥಾಪಕರಾದ ಚಂದ್ರಹಾಸ ಗುರುಸ್ವಾಮಿ, ಉಪಾಧ್ಯಕ್ಷರುಗಳಾದ ಚಂದ್ರಹಾಸ ಜೆ. ಶೆಟ್ಟಿ, ಸೂರ್ಯಪ್ರಕಾಶ್ ಶಟ್ಟಿಗಾರ್, ಗೌರವ ಪ್ರಧಾನ ಕಾರ್ಯದರ್ಶಿ, ಬಾಬು ಎಂ ಶೆಟ್ಟಿ ಗೌರವ ಕೋಶಧಿಕಾರಿ ವಿಜಯ ಎಸ್. ಶೆಟ್ಟಿ , ಜೊತೆ ಕಾರ್ಯದರ್ಶಿಗಳಾದ ದಿಲೀಪ್ ಎಸ್. ಶೆಟ್ಟಿ ಪ್ರಭಾಶ್ಚಂದ್ರ ಎಸ್. ಶೆಟ್ಟಿ, ಜೊತೆ ಕೋಶಾಧಿಕಾರಿಗಳಾದ ಭರತ್ ಕೆ ಶೆಟ್ಟಿ, ಶಂಕರ್ ಎನ್ ಶೆಟ್ಟಿ ಮತ್ತು ಅಯ್ಯಪ್ಪ ಭಕ್ತ ವೃಂದ ಶಂಕರಪುರ ಹಾಗೂ ಮುಂಬಯಿಯ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.
Additional image Additional image
04 Jan 2023, 11:30 PM
Category: Kaup
Tags: