ಜನವರಿ 8 : ಪಡುಬಿದ್ರಿ ಬ್ಯಾಡ್ಮಿಂಟನ್ ಕ್ಲಬ್ - ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಪಿಬಿಸಿ ಟ್ರೋಫಿ 2023
ಪಡುಬಿದ್ರಿ : ಇಲ್ಲಿನ ಪಡುಬಿದ್ರಿ ಬ್ಯಾಡ್ಮಿಂಟನ್ ಕ್ಲಬ್ ಅರ್ಪಿಸುವ ದಿವಂಗತ ಲೋಹಿತಾಕ್ಷ ಸುವರ್ಣ ಸ್ಮರಣಾರ್ಥ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಪಿಬಿಸಿ ಟ್ರೋಫಿ 2023 ಇದರ ಉದ್ಘಾಟನೆ ಜನವರಿ 8, ಆದಿತ್ಯವಾರ ಬೆಳಿಗ್ಗೆ 8:30 ಕ್ಕೆ ಹಳೆಯಂಗಡಿಯ ಟೋರ್ಪೆಡೋಸ್ ಸ್ಫೋಟ್೯್ಸ ಕ್ಲಬ್ ನ ಒಳಾಂಗಣ ಶಟಲ್ ಕೋಟ್೯ ಇಲ್ಲಿ ಜರಗಲಿದೆ.
8 ತಂಡಗಳು, 64 ಆಟಗಾರರು ಭಾಗವಹಿಸಲಿದ್ದಾರೆ. ಪ್ರಥಮ ಬಹುಮಾನ ರೂ.7,777 ಮತ್ತು ದ್ವಿತೀಯ ಬಹುಮಾನ ರೂ.5,555 ಜೊತೆಗೆ ಪಿಬಿಸಿ ಟ್ರೋಫಿ ಇರಲಿದೆ. ಬೆಸ್ಟ್ ಎಮರ್ಜಿಂಗ್ ಪ್ಲೇಯರ್ ಮತ್ತು ಬೆಸ್ಟ್ ಆಲ್ರೌಂಡರ್ ಪ್ರಶಸ್ತಿ ಇರಲಿದೆ.
ಕಾರ್ಯಕ್ರಮವನ್ನು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಡಿ ಎಸ್ ಅಬ್ದುಲ್ ರೆಹಮಾನ್, ನವೀನ್ಚಂದ್ರ ಶೆಟ್ಟಿ, ವೈ ಸುಧೀರ್ ಕುಮಾರ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿತೇಂದ್ರ ಜೆ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ, ಜಿತೇಂದ್ರ ಫುರ್ಟಾಡೊ, ಅಬ್ದುಲ್ ಅಝೀಝ್, ಗೀತಾ ಅರುಣ್ ಭಾಗವಹಿಸಲಿದ್ದಾರೆ.
ಪಡುಬಿದ್ರಿ ಬ್ಯಾಡ್ಮಿಂಟನ್ ಕ್ಲಬ್ ನ ಅಧ್ಯಕ್ಷರಾದ ವೈ ಸುಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.
ತಂಡಗಳು : ನವೀನ್ ಎನ್ ಶೆಟ್ಟಿ ಮಾಲೀಕತ್ವದ ಮೋಹಿತ್ ಸ್ಮಾಶರ್ಸ್, ಕಪೀಲ್ ಕುಮಾರ್ ರವರ ಮಾಹಿ ವಾರಿಯಸ್೯, ನಸ್ರುಲ್ಲರವರ ಟೀಮ್ ಸಿಗ್ನೇಚರ್, ದೀಕ್ಷಿತ್ ರವರ ವಿಹಾನ್ ಗ್ಲಾಡಿಯೇಟರ್, ಶಂಕರ್ ಕಂಚಿನಡ್ಕ ಇವರ ಯಶ್ ವಾರಿಯಸ್೯, ಕೃಷ್ಣ ಬಂಗೇರರ ಯನ್ಶ್ ರಿಯಲ್ ಫೈಟಸ್೯, ಅನ್ವರ್ ಅಹ್ಮದ್ ರ ಕ್ಲಬ್ ಎನ್ಫಿಗೊ, ಸಿರಾಜ್ ರವರ ಓಶಿಯನ್ ವಾರಿಯಸ್೯ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ನಲ್ಲಿ ಭಾಗವಹಿಸಲಿದೆ ಎಂದು ಪಡುಬಿದ್ರಿ ಬ್ಯಾಡ್ಮಿಂಟನ್ ಕ್ಲಬ್ ನ ಕಾರ್ಯದರ್ಶಿ ರಮೀಝ್ ಹುಸೈನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
