ಜನವರಿ 8 : ತುಳುಕೂಟ ಉಡುಪಿ ವತಿಯಿಂದ ತುಳು ಭಾವಗೀತೆ ಗಾಯನ
Thumbnail
ಉಡುಪಿ : ತುಳುಕೂಟ ಉಡುಪಿ (ರಿ.) ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಇವರ ಸಹಯೋಗದಲ್ಲಿ ದಿ.ನಿಟ್ಟೂರು ಸಂಜೀವ ಭಂಡಾರಿ ಸ್ಮರಣಾರ್ಥ ತುಳು ಭಾವಗೀತೆ ಗಾಯನ ಜನವರಿ 8, ಭಾನುವಾರ ಬೆಳಗ್ಗೆ 9 ಗಂಟೆಗೆ ಉಡುಪಿ ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಜರಗಲಿದೆ. ಕಾರ್ಯಕ್ರಮವನ್ನು ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ, ವೀಣಾ ಬಿ. ಎಸ್ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಉಡುಪಿಯ ಚಾರ್ಟರ್ಡ್ ಅಕೌಂಟೆಂಟ್ ಸಿ ಎ ಜೀವನ್ ಕುಮಾರ್, ದುಬೈಯ ಕ್ರಿಯಾತ್ಮಕ ನಿರ್ದೇಶಕರಾದ ಬಿ. ಕೆ. ಗಣೇಶ್ ರೈ, ಮಲ್ಪೆಯ ಯುವ ಉದ್ಯಮಿ ಹರೀಶ್ ಶ್ರೀಯಾನ್, ಶ್ರೀರಸ್ತು ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ಲಿ.) ಉಡುಪಿಯ ಅಧ್ಯಕ್ಷರಾದ ರಾಮ್ ವಿ ಕುಂದರ್, ಮಾಡೆಲಿಂಗ್ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ಪುರಸ್ಕೃತರಾದ ವಿದ್ಯಾ ಸರಸ್ವತಿ, ಪ್ರೈಮ್ ಟಿವಿ ನಿರ್ದೇಶಕರಾದ ರೂಪೇಶ್ ವಿ.ಕಲ್ಮಾಡಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳುಕೂಟ ಉಡುಪಿ (ರಿ.) ಇದರ ಅಧ್ಯಕ್ಷರಾದ ಬಿ. ಜಯಕರ್ ಶೆಟ್ಟಿ ಇಂದ್ರಾಳಿ ವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಸಂಚಾಲಕರಾದ ಪ್ರಕಾಶ್ ಸುವರ್ಣ ಕಟಪಾಡಿ ತಿಳಿಸಿದ್ದಾರೆ.
07 Jan 2023, 04:14 PM
Category: Kaup
Tags: