ಕುಲಾಲ ಸಮಾಜ ಸೇವಾ ಸಂಘ, ಮಹಿಳಾ ಘಟಕ ಬೆಳಪು : ವಾರ್ಷಿಕ ಮಹಾಸಭೆ, ಸನ್ಮಾನ, ವಿದ್ಯಾರ್ಥಿ ವೇತನ ವಿತರಣೆ
Thumbnail
ಕಾಪು : ಕುಲಾಲ ಸಮಾಜ ಸೇವಾ ಸಂಘ (ರಿ ) ಬೆಳಪು ಇದರ ಸಂಘದ ವಾರ್ಷಿಕ ಮಹಾಸಭೆಯು ಜನವರಿ 08 ರಂದು ಬೆಳಪು ವ್ಯವಸಾಯ ಸೇವಾ ಸಹಕಾರಿ ಸಂಘ (ನಿ.) ಪಣಿಯೂರು ಇದರ ಸಭಾಂಗಣದಲ್ಲಿ ಜರಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಳಪು ವ್ಯವಸಾಯ ಸೇವಾ ಸಂಘದ ಅಧ್ಯಕ್ಷರಾದ ಡಾ|| ದೇವಿಪ್ರಸಾದ್ ಶೆಟ್ಟಿ ಮುಂದಿನ ದಿನಗಳಲ್ಲಿ ಬೆಳಪುವಿನಲ್ಲಿ ಆರಂಭ ಆಗುವ ಕಾರ್ಖಾನೆಗಳಲ್ಲಿ ಕುಲಾಲ ಸಮುದಾಯದವರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಿಕೊಡುವುದಲ್ಲದೆ ಕುಲಾಲ ಸಮುದಾಯ ಭವನ ನಿರ್ಮಾಣಕ್ಕೆ ಸ್ಥಳದ ವ್ಯವಸ್ಥೆಯನ್ನು ಮಾಡಿಕೊಡುವುದಾಗಿ ಭರವಸೆ ನೀಡಿದರು. ಈ ಸಂದರ್ಭ ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಾದ ಐತು ಕುಲಾಲ್ ಕನ್ಸಾನ, ಗಣೇಶ್ ಪಂಜಿಮಾರು ಮತ್ತು ಸಂಘದ ಹಿರಿಯರಾದ ಕುಟ್ಟಿ ಮೂಲ್ಯ ಇವರನ್ನು ಸನ್ಮಾನಿಸಲಾಯಿತು. ಕಲಿಕೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಸುಧಾಕರ್ ಕುಲಾರ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂದೀಪ್ ಮೂಲ್ಯ, ಗೀತಾ ವೈ,ಉಮೇಶ್ ಕುಲಾಲ್ ಉಪಸ್ಥಿತರಿದ್ದರು. ಕೋಶಾಧಿಕಾರಿ ಹರೀಶ್ ಕುಲಾಲ್ ವಾರ್ಷಿಕ ವರದಿ ಮಂಡಿಸಿದರು. ಮಲ್ಲಿಕಾ ಉಮೇಶ್ ಮಹಿಳಾ ಘಟಕದ ವರದಿಯನ್ನು ಮಂಡಿಸಿದರು. ಜನಾರ್ದನ್ ಕುಲಾಲ್ ಸ್ವಾಗತಿಸಿದರು. ಸತೀಶ್ ಕುಲಾಲ್ ಕುಂಜೂರು ಕಾರ್ಯಕ್ರಮ ನಿರೂಪಿಸಿದರು. ಸುಜಯ ಕುಲಾಲ್ ವಂದಿಸಿದರು.
Additional image Additional image
09 Jan 2023, 08:18 PM
Category: Kaup
Tags: