ಜನವರಿ 21 : ಉಡುಪಿ ಜಿಲ್ಲೆಯ ರಜತ ಮಹೋತ್ಸವ - ಕಾಪು ಕಡಲ ಕಿನಾರೆಯಲ್ಲಿ ಸಭಾ, ಸಾಂಸ್ಕೃತಿಕ, ಸಂಗೀತ ರಸಮಂಜರಿ ಕಾರ್ಯಕ್ರಮ
ಕಾಪು : ತಾಲೂಕು ಆಡಳಿತದ ವತಿಯಿಂದ
ಉಡುಪಿ ಜಿಲ್ಲೆಯ ರಜತ ಮಹೋತ್ಸವದ ಅಂಗವಾಗಿ ಜನವರಿ 21, ಶನಿವಾರ ಅಪರಾಹ್ನ 2.30 ಗಂಟೆಯಿಂದ ಕಾಪು ಕಡಲ ಕಿನಾರೆಯಲ್ಲಿ ವಿವಿಧ ಕಾರ್ಯಕ್ರಮಗಳು ಜರಗಲಿವೆ.
ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದರಾದ ಡಿ.ವಿ ಸದಾನಂದ ಗೌಡ ಉದ್ಘಾಟಿಸಲಿದ್ದಾರೆ.
ಅಪರಾಹ್ನ 2.30 ರಿಂದ 3.30 ರವರೆಗೆ
ಸ್ತಬ್ಧ ಚಿತ್ರ ಮೆರವಣಿಗೆ ಕಾಪು ಪುರಸಭೆಯಿಂದ - ಕಾಪು ಪೇಟೆಯಾಗಿ - ಕಾಪು ಬೀಚ್ ಗೆ ಸಾಗಲಿದೆ.
ಕಾಪು ಕಡಲ ಕಿನಾರೆಯಲ್ಲಿ ಅಪರಾಹ್ನ ಗಂಟೆ 3.30 ರಿಂದ 5 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು
ಸಂಜೆ 5 ಕ್ಕೆ ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ, ಸಂಜೆ ಗಂಟೆ 6 ರಿಂದ ಖ್ಯಾತ ಸಂಗೀತ ನಿರ್ದೇಶಕರಾದ ಗುರುಕಿರಣ್ ಹಾಗೂ ತಂಡದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಜರಗಲಿದೆ.
