ಬಂಟಕಲ್ಲು : ವಿಕಾಸ ಸೇವಾ ಸಮಿತಿಯಿಂದ ಹೊಂಡಮಯ ರಸ್ತೆಗೆ ಕಾಂಕ್ರೀಟ್ ಹಾಕುವ ಕಾರ್ಯ ; ಗ್ರಾಮಸ್ಥರ ಮೆಚ್ಚುಗೆ
ಬಂಟಕಲ್ಲು : ನ್ಯೂ ಹೇರೂರು ಫ್ರೆಂಡ್ಸ್ ಮತ್ತು ವಿಕಾಸ ಸೇವಾ ಸಮಿತಿ ಇದರ ವತಿಯಿಂದ ಹೊಂಡಮಯ ರಸ್ತೆಗಳಿಗೆ ಕಾಂಕ್ರೀಟ್ ಹಾಕುವ ಶ್ರಮದಾನದಲ್ಲಿ ವಿಕಾಸ ಸೇವಾ ಸಮಿತಿಯು ಪಾಲ್ಗೊಂಡಿತು.
ಈ ಸಂದರ್ಭ ವಿಕಾಸ ಸೇವಾ ಸಮಿತಿಯ ಅಧ್ಯಕ್ಷರಾದ ಮಾಧವಾಚಾರ್ಯರು ಮಾತನಾಡಿ
ಸಂಘ ಸಂಸ್ಥೆಗಳು ಗ್ರಾಮಸ್ಥರು ವಿಶ್ವಾಸವನ್ನು ಗಳಿಸಿ ಸಮಾಜಮುಖಿ ಕಾರ್ಯಕ್ರಮ ನಡೆಸಿ ಸದೃಢವಾಗಿ ಬೆಳೆಯಬೇಕು ಎಂದು ಅಭಿಪ್ರಾಯಪಟ್ಟರು.
ನಾನೇ ನಾನೇ ಎಂಬ ಅಹಂ ಮೆರೆತು ನಾವೆಲ್ಲ ಒಂದು ಎಂಬ ಭಾವನೆಯಿಂದ ನಮ್ಮ ಗ್ರಾಮ ಸ್ವಚ್ಛ ಗ್ರಾಮವಾಗಿ ಬೆಳೆಯಬೇಕೆಂದು ಅಧ್ಯಕ್ಷ ರಾಜೇಶ್ ಜೋಗಿ ಹೇಳಿದರು.
ಕಳೆದ ಹಲವಾರು ತಿಂಗಳಿಂದ ವಾಹನಗಳಿಗೆ ರಸ್ತೆಯಲ್ಲಿ ಚಲಿಸಲು ಅಸಾಧ್ಯ ವಾಗುವುದನ್ನು ಮನಗಂಡು ಸುಮಾರು 20ಕ್ಕೂ ಮಿಕ್ಕಿ ಸದಸ್ಯರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
ಸಮಿತಿಯ ಗೌರವಾಧ್ಯಕ್ಷ ಗಣಪತಿ ಆಚಾರ್ಯ, ಪಂಚಾಯತ್ ಸದಸ್ಯ ವಿಜಯ್ ಧೀರಜ್, ನ್ಯೂ ಹೇರೂರು ಫ್ರೆಂಡ್ಸ್ನ ಕೋಶಾಧಿಕಾರಿ ಸುಧೀರ್ ಪಾಲ್ಗೊಂಡಿದ್ದರು. ಈ ಶ್ರಮದಾನ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.
