ಕಾರ್ಕಳ : ಯುವಕರ ಕಣ್ಮಣಿ ನೇತಾಜಿ ಸುಭಾಶ್ಚಂದ್ರ ಬೋಸ್ ಜನ್ಮದಿನ ಆಚರಣೆ
ಕಾರ್ಕಳ : ಇಲ್ಲಿನ ಕ್ರಿಯೇಟಿವ್ ಪಿ ಯು ಕಾಲೇಜಿನಲ್ಲಿ ಜನವರಿ 23 ರಂದು ನೇತಾಜಿ ಸುಭಾಶ್ಚಂದ್ರ ಬೋಸ್ ರವರ ಜಯಂತಿ ಅಧಿಕೃತವಾಗಿ ಪರಾಕ್ರಮ್ ದಿವಸ್ ಆಚರಿಸಲಾಯಿತು.
ಇಡೀ ಭಾರತದಲ್ಲಿ ಸ್ವಾತಂತ್ರ್ಯದ ರಣಕಹಳೆ ಮೊಳಗಿಸಿ ನಿಮ್ಮ ರಕ್ತ ನೀಡಿ, ದೇಶಕ್ಕೆ ಸ್ವಾತಂತ್ರ್ಯ ಕೊಡಿಸುತ್ತೇನೆ ಎಂಬ ಸಿಡಿಲಬ್ಬರದ ಘರ್ಜನೆಯನ್ನು ಮಾಡಿದ ಅಪ್ರತಿಮ ಸಾಹಸಿ ನೇತಾಜಿಯವರ ದೇಶಪ್ರೇಮ ನಮಗೆ ಮಾದರಿಯಾಗಬೇಕು ಎಂದು ಹಿಂದಿ ಉಪನ್ಯಾಸಕ ವಿನಾಯಕ ಜೋಗ್ ಕರೆ ನೀಡಿದರು.
ಈ ಸಂದರ್ಭದಲ್ಲಿ ಕ್ರಿಯೇಟಿವ್ ವಿದ್ಯಾಸಂಸ್ಥೆಯ ಉಪನ್ಯಾಸಕರಾದ ನಂದೀಶ್ ಹೆಚ್ ಬಿ, ಉಮೇಶ್, ರಾಘವೇಂದ್ರ ಬಿ ರಾವ್, ಅಗ್ರಜ ರಾಘವ್, ಶಿವಕುಮಾರ್, ರಾಜೇಶ ಶೆಟ್ಟಿ, ಗಿರೀಶ್ ಭಟ್ ಹಾಗೂ ಬೋದಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕನ್ನಡ ಉಪನ್ಯಾಸಕ ರಾಮಕೃಷ್ಣ ಹೆಗಡೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
