ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ: ಕಾಪು ತಾಲೂಕು ನೂತನ ಪದಾಧಿಕಾರಿಗಳ ಆಯ್ಕೆ
ಕಾಪು : ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಕಾಪು ತಾಲೂಕಿನ 2023-2024ನೇ ಅವಧಿಯ ನೂತನ ಅಧ್ಯಕ್ಷರಾಗಿ ನಸೀರ್ ಅಹಮದ್ ಆಯ್ಕೆಯಾಗಿದ್ದಾರೆ.
ಕಾಪುವಿನಲ್ಲಿ ನಡೆದ ತಾಲೂಕು ಸಮಿತಿಯ ಸಭೆಯಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಈ ವೇಳೆ ಉಪಾಧ್ಯಕ್ಷರಾಗಿ ಮುಸ್ತಾಕ್ ಇಬ್ರಾಹಿಂ ಬೆಳಪು, ಕಾರ್ಯದರ್ಶಿಯಾಗಿ ರಿಯಾಜ್ ಅಹಮದ್ ನಜೀರ್ ಮುದರಂಗಡಿ, ಜೊತೆ ಕಾರ್ಯದರ್ಶಿಯಾಗಿ ವೈ. ಎಮ್ ಇಲಿಯಾಸ್ ಕಟಪಾಡಿ, ಕೋಶಾಧಿಕಾರಿಯಾಗಿ ಮೊಹಮ್ಮದ್ ಆಝಮ್ ಶೇಕ್ ಉಚ್ಚಿಲ ಹಾಗೂ ತಾಲೂಕು ಸಮಿತಿಯ ಸದಸ್ಯರಾಗಿ ಬಿ.ಎಮ್ ಮೊಯ್ದಿನ್ ಕಟಪಾಡಿ, ಅಬ್ದುಲ್ ರಜಾಕ್ ಕಟಪಾಡಿ, ಅಮೀರ್ ಹಂಝ ಕಾಪು, ರಮೀಜ್ ಹುಸೈನ್ ಪಡುಬಿದ್ರಿ, ಅಬ್ದುಲ್ ಹಮೀದ್ ಪಡುಬಿದ್ರಿ, ಮುಹಮ್ಮದ್ ಇಕ್ಬಾಲ್ ಸಾಹೇಬ್ ಮಜೂರ್, ಮುಹಮ್ಮದ್ ಸಾದಿಕ್ ದಿನಾರ್, ಮುಹಮ್ಮದ್ ಸುಲೇಮಾನ್ ಮಲ್ಲಾರ್ ಅವರನ್ನು ಆಯ್ಕೆ ಮಾಡಲಾಗಿದೆ.
ಅಬ್ದುರಹಮಾನ್ ಚಂದ್ರನಗರ, ಮೊಹಮ್ಮದ್ ಅಷ್ಪಾಕ್ ಮೊಹಸಿನ್ ಮಲ್ಲಾರ್, ಎಮ್. ಎಸ್. ಅಬ್ಬಾಸ್ ಹಾಜಿ ಕನ್ನಂಗಾರ್, ಅಬೂಬಕರ್ ಪಾದೂರ್ ಮತ್ತು ಸಿರಾಜ್ ಉಚ್ಚಿಲ,
ಅವರನ್ನು ತಾಲೂಕು ಸಮಿತಿಯ ಸದಸ್ಯರಾಗಿ ನಾಮನಿರ್ದೇಶನ ಮಾಡಲಾಯಿತು. ಜಿಲ್ಲಾ ಸಮಿತಿಗೆ ಎಮ್. ಪಿ. ಮೊಯಿದಿನಬ್ಬ ಅಬ್ದುರಹಮಾನ್ ಕನ್ನಂಗಾರ್ ರವರು ಜಿಲ್ಲಾ ವತಿಯಿಂದ ನೇಮಿಸಲ್ಪಟ್ಟಿರುವರು.
ಸಭೆಯಲ್ಲಿ ಕಾರ್ಯದರ್ಶಿ ಇಸ್ಮಾಯಿಲ್ ಹುಸೈನ್ ಕಟಪಾಡಿ, ಸಂಘಟನಾ ಕಾರ್ಯದರ್ಶಿ ಎಸ್. ಕೆ. ಇಕ್ಬಾಲ್ ಉಪಸ್ಥಿತರಿದ್ದರು.
ಅನ್ವರ್ ಅಲಿಯವರ ಕುರಾನ್ ಪಠಣದೊಂದಿಗೆ ಸಭೆ ಪ್ರಾರಂಭವಾಗಿ, ಜನಾಬ್ ಶಬೀಹ್ ಅಹಮದ್ ಕಾಝಿ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇದ್ರಿಸ್ ರವರು ಪ್ರಾಸ್ತವಿಕ ಮಾತುಗಳನ್ನಾಡಿದರು. ಜಿಲ್ಲಾ ಉಪಾಧ್ಯಕ್ಷರಾದ ಸಲಾಹುದ್ದೀನ್ ಹೂಡೆ ಚುನಾವಣಾ ಪ್ರಕ್ರಿಯೆ ನಡೆಸಿ ಕೊಟ್ಟರು. ಹಾಲಿ ಅಧ್ಯಕ್ಷರಾದ ಶಭಿ ಅಹ್ಮದ್ ಖಾಝಿ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. ರಿಯಾಜ್ ಅಹಮದ್ ನಜೀರ್ ವಂದಿಸಿದರು.
