ಮಂಗಳೂರು : ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದಿಂದ ಕಾವ್ಯಾನುಬಂಧ ವಿಚಾರಗೋಷ್ಠಿ – ಕವಿಗೋಷ್ಠಿ
Thumbnail
ಮಂಗಳೂರು : ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ (KSSAP )ಆಶ್ರಯದಲ್ಲಿ ನಾಡು ಕಂಡ ಅದ್ವಿತೀಯ ಪ್ರೇಮ ಕವಿ ಕೆ.ಎಸ್‌ ನರಸಿಂಹ ಸ್ವಾಮಿಯವರ ಜನ್ಮ ದಿನಾಚರಣೆ ಪ್ರಯುಕ್ತ ಕದ್ರಿ ಬಾಲ ಭವನದಲ್ಲಿ ಕಾವ್ಯಾನುಬಂಧ ವಿಚಾರಗೋಷ್ಠಿ – ಕವಿಗೋಷ್ಠಿ ನಡೆಸುವ ಮೂಲಕ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಅಭಿಯಂತರ, ಕವಿ ಸಾಹಿತಿ ಡಾ. ಆನಂದ್‌ ಬಂಜನ್‌ ಮಾತನಾಡಿ ಕೆ.ಎಸ್. ನರಸಿಂಹ ಸ್ವಾಮಿಯವರ ಸಾಹಿತ್ಯ ಪ್ರಕಾರ ಇಂದಿಗೂ ಜೀವಂತ ಇದೆ ಎಂದರೆ ಅವರ ಸಾಹಿತ್ಯದ ಗಟ್ಟಿತನ ಅನುಭವಿಸಿ ಬರೆದ ರೀತಿ ಪ್ರೀತಿಯನ್ನು ವರ್ಣಿಸಿದ ರೀತಿ ಅನನ್ಯವಾದುದು. ಬಹುಶ: ಇಂದು ಜಗತ್ತಿನ ಅತ್ಯಂತ ಶಾಂತಿ ಪ್ರಿಯರು ಎಂದರೆ ಕವಿಗಳು ಹಾಗೂ ಕಥೆಗಾರರು. ಎಂದ ಅವರು ಆರ್ಥಿಕ ಸ್ಥಿತಿಯಲ್ಲಿ ಹಿನ್ನಡೆಯಿದ್ದರೂ ಕವಿಗಳು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ನ ದ.ಕ ಜಿಲ್ಲಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನ್ಯಾಯವಾದಿ ಕವಯತ್ರಿ ವಿಮರ್ಶಕಿ ಪರಿಮಳ ಮಹೇಶ್‌ ರಾವ್‌ ಇವರನ್ನು ಅಭಿನಂದಿಸಲಾಯಿತು. ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ, ಆಕಾಶವಾಣಿಯ ವಿಶ್ರಾಂತ ಉದ್ಘೋಷಕ ಮುದ್ದು ಮೂಡುಬೆಳ್ಳೆ ಮಾತನಾಡಿ ಮೈಸೂರು ಮಲ್ಲಿಗೆಯ ಲಾವಣ್ಯ ಅಪ್ಸರೆಯ ಚೆಲುವಿನಂತೆ ಎಂದು ವರಕವಿ ಬೇಂದ್ರೆಯಂತವರೇ ಆಶ್ಚರ್ಯಪಟ್ಟಿದ್ದರು ಯಾಕೆಂದರೆ ಮೈಸೂರು ಮಲ್ಲಿಗೆ ಎಲ್ಲಾ ಯುವ ಪೀಳಿಗೆಗಳನ್ನು ಆಕರ್ಷಿಸಿತ್ತು. ಮೈಸೂರು ಮಲ್ಲಿಗೆ ಅಂದಿಗೂ ಇಂದಿಗೂ ಚಿರನೂತನವಾಗಿರುವುದು ಕಾಲದ ಸತ್ಯ ಎಂದ ಅವರು ಎಲ್ಲಾ ಕವಿಗಳ ಕವಿತೆಗಳ ಬಗ್ಗೆ ಅತ್ಯಂತ ಸರಳವಾಗಿ ಮತ್ತು ಮಾರ್ಮಿಕವಾಗಿ ನುಡಿದರು. ವೇದಿಕೆಯಲ್ಲಿ ಉಪನ್ಯಾಸಕ ಡಾ ಫ್ರಾನ್ಸಿಸ್‌ ಕ್ಸೇವಿಯರ್‌, ಚಲನಚಿತ್ರ ಸೆನ್ಸಾರ್‌ ಮಂಡಳಿಯ ಸದಸ್ಯೆ ಡಾ. ಮೀರಾ ಅನುರಾಧಾ ಪಡಿಯಾರ್‌, NSCDF ಅಧ್ಯಕ್ಷ ಗಂಗಾಧರ ಗಾಂಧಿ, PTI ವರದಿಗಾರ ಎಸ್.ಜಯರಾಂ ಉಪಸ್ಥಿತರಿದ್ದರು. KSSAP ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ಸ್ವಾಗತಿಸಿ ಪ್ರಸ್ತಾವನೆಗೈದರು. ರಶ್ಮಿ ಸನಿಲ್‌ ನಿರೂಪಿಸಿದರು. ಗುಣಾಜೆ ರಾಮಚಂದ್ರ ಭ̧ಟ್‌ ಸೌಮ್ಯ ಆರ್‌ ಶೆಟ್ಟಿ,ಶ್ಯಾಮ್‌ ಪ್ರಸಾದ್‌ ಭಟ್‌, ಕಾರ್ಕಳ, ಹಿತೇಶ್‌ ಕುಮಾರ್ ಎ, ಅಶ್ರಫ್‌ ಅಲಿ ಕುಙಿ ಮುಂಡಾಜೆ, ಬಾಸ್ಕರ್‌ ವರ್ಕಾಡಿ, ಅಮರನಾಥ ಪೂಪಾಡಿಕಲ್ಲು, ಗೀತಾ ಲಕ್ಷ್ಮೀಶ್‌, ಅಜಿತ್‌ ಪ್ರಸಾದ್‌, ಎ.ಕೆ ಕುಕ್ಕಿಲ, ರೂಪಾ ವಿನಯ್‌, ಅಶ್ವಿಜಾ ಶ್ರೀಧರ್‌, ಹರೀಶ್‌ ಕುಮಾರ್‌ ಮೆಲ್ಕಾರ್‌, ಶಿವಪ್ರಸಾದ್‌ ಕೊಕ್ಕಡ, ರಶ್ಮಿತಾ ಸುರೇಶ್‌, ಮಾಣಿ, ರೇಖಾ ಸುದೇಶ್‌ ರಾವ್, ಸುರೇಶ್‌ ನೆಗಳಗುಳಿ, ಗೋಪಾಲಕೃಷ್ಣ ಶಾಸ್ತ್ರಿ, ಸಿಹಾನ ಬಿ.ಎಂ, ಸೌಮ್ಯ ಗೋಪಾಲ್‌, ರೇಮಂಡ್‌ ತಾಕೋಡೆ, ಆಶಾಲತಾ ಕಾಮತ್, ಲಿಖಿತಾ ಕೋಟ್ಯಾನ್ ಅಲ್ಲಿಪಾದೆ, ಮಾನ್ವಿ, ಸುಮಂಗಲಾ‌ ದಿನೇಶ್. ರಾಮಾಂಜಿ, ನಾರಾಯಣ ಕುಂಬ್ರ, ಜೂಲಿಯೇಟ್‌ ಫೆರ್ನಾಂಡೀಸ್‌ ಹಾಗೂ ಹೃದಯ ಕವಿ ಮನ್ಸೂರ್‌ ಮುಲ್ಕಿ ಪ್ರೇಮಾಧಾರಿತ ಕವನಗಳನ್ನು ವಾಚಿಸಿದರು. ಕವಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
Additional image Additional image Additional image
26 Jan 2023, 07:38 PM
Category: Kaup
Tags: