ಜೆಸಿಐ ಕಟಪಾಡಿ ವತಿಯಿಂದ ಟ್ರಾಫಿಕ್ ಪೋಲಿಸರಿಗೆ ಸನ್ಮಾನ
Thumbnail
ಕಟಪಾಡಿ : ಜೆಸಿಐ ಇಂಡಿಯಾ ಇದರ ವಲಯ 15ರ ಕಾರ್ಯಕ್ರಮ, ಕಟಪಾಡಿ ಘಟಕದ ವತಿಯಿಂದ ಸೆಲ್ಯೂಟ್ ದ ಸೈಲೆಂಟ್ ವರ್ಕರ್ ಕಾರ್ಯಕ್ರಮದ ಅಂಗವಾಗಿ ಗುರುವಾರ ಕಟಪಾಡಿ ಹೊರ ಠಾಣೆಯಲ್ಲಿ ಟ್ರಾಫಿಕ್ ಪೊಲೀಸರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಜೆಸಿಐ ಪೂರ್ವ ಅಧ್ಯಕ್ಷರಾದ ಡಾ.ಉದಯಕುಮಾರ್ ಶೆಟ್ಟಿ ಮತ್ತು ಪೂರ್ವ ವಲಯಧ್ಯಕ್ಷರಾದ ಹರಿಶ್ಚಂದ್ರ ಅಮೀನ್ ಭಾಗವಹಿಸಿದ್ದರು. ಜೆಸಿಐ ವಲಯ XVರ ಅಧ್ಯಕ್ಷರಾದ ಜ್ಯೋತಿ ಶಂಕರ್ ಅಧ್ಯಕ್ಷತೆ ವಹಿಸಿದ್ದರು. ವಲಯಧಿಕಾರಿ ಪ್ರವೀಣ್ ಪೂಜಾರಿ, ಪೂರ್ವಧ್ಯಾಕ್ಷರಾದ ಮಹೇಶ್ ಅಂಚನ್, ಜಯಶ್ರೀ ಕೋಟ್ಯಾನ್, ಸುರೇಶ್ ಪೂಜಾರಿ, ಕಾರ್ಯದರ್ಶಿ ವಿಜೇತ್ ಪೂಜಾರಿ ಉಪಸ್ಥಿತರಿದ್ದರು. ಪ್ರವೀಣ್ ಜತ್ತನ್ ಕಾರ್ಯಕ್ರಮ ನಿರ್ವಹಿಸಿದರು.
Additional image
27 Jan 2023, 05:59 PM
Category: Kaup
Tags: