ಪಾಂಗಾಳ : ಹಾಡುಹಗಲೇ ಯುವಕನ ಕೊಲೆ
ಕಾಪು : ಪಾಂಗಾಳದಲ್ಲಿ ಯುವಕನೋರ್ವನನ್ನು ಚೂರಿಯಿಂದ ಇರಿದು ಬರ್ಬರವಾಗಿ ಇರಿದು ಕೊಲೆಗೈದ ಘಟನೆ ರವಿವಾರ ಸಂಜೆ ನಡೆದಿದೆ.
ಪಾಂಗಾಳ ಮಂಡೇಡಿ ನಿವಾಸಿ
ಶರತ್ ಶೆಟ್ಟಿ (41) ಮೃತ ಯುವಕ.
ಪಾಂಗಾಳ ಶ್ರೀ ಜನಾರ್ದನ ದೇವಸ್ಥಾನದ ಬಳಿಯ ಅಂಗಡಿಯ ಬಳಿಯೊಂದರಲ್ಲಿ ಕೃತ್ಯ ನಡೆದಿದ್ದು ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು.
ಕಾಪು ವೃತ್ತ ನಿರೀಕ್ಷಕ ಕೆ.ಸಿ. ಪೂವಯ್ಯ, ಕಾಪು ಎಸ್ಸೈ ಸುಮ ಬಿ., ಕ್ರೈಂ ಎಸ್ಸೈ ಭರತೇಶ್ ಕಂಕಣವಾಡಿ ಸಹಿತ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸಿದ್ದಾರೆ.
