ಕಟಪಾಡಿ : ಯುವಜನ ಸೇವಾ ಸಂಘ ಏಣಗುಡ್ಡೆ - ನೂತನ ಸಂಘದ ಉದ್ಘಾಟನೆ
ಕಟಪಾಡಿ : ಯುವಜನ ಸೇವಾ ಸಂಘ ಏಣಗುಡ್ಡೆ ಕಟಪಾಡಿ ಇದರ ನೂತನ ಸಂಘದ ಉದ್ಘಾಟನಾ ಸಮಾರಂಭವು ಫೆಬ್ರವರಿ 5 ರಂದು ಕಟಪಾಡಿಯ ತ್ರಿಶಾ ವಿದ್ಯಾಕಾಲೇಜ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಡಾ ಉದಯ ಕುಮಾರ್ ಶೆಟ್ಟಿ ಹಾಗೂ ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜ್ ನ ಇಂದುರೀತಿ ಉದ್ಘಾಟಿಸಿದರು.
ಇದರ ಪ್ರಯುಕ್ತ ಯುವಜನ ಸೇವಾ ಸಂಘದ ನೇತೃತ್ವದಲ್ಲಿ, ರಾ.ಸೇ. ಯೋಜನಾ ಘಟಕ ತ್ರಿಶಾ ವಿದ್ಯಾ ಕಾಲೇಜು,ಕಟಪಾಡಿ ಉಡುಪಿ,ರಕ್ತನಿಧಿ, ಜಿಲ್ಲಾ ಆಸ್ಪತ್ರೆ ಉಡುಪಿ ಇದರ ಸಂಯುಕ್ತ ಆಶ್ರಯದಲ್ಲಿ ಹಾಗೂ ಹಲವಾರು ಸಂಘ ಸಂಸ್ಥೆಗಳ ಸಹಯೋಗದಿಂದ ರಕ್ತದಾನ ಶಿಬಿರ ಹಾಗೂ ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಕಾರ್ಯಾಗಾರ ನಡೆಯಿತು.
ಸಂಘದ ಅಧಿಕೃತ ಲೋಗೋವನ್ನು ಅರ್ಚಿಟೆಕ್ಟ್ ಪ್ರಮುಖ್ ರೈ ಹಾಗೂ ಕಾಪು ಪೊಲೀಸ್ ಠಾಣೆಯ ಉಪನಿರೀಕ್ಷಕ ದಯಾನಂದ ಬಿಡುಗಡೆ ಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಉಡುಪಿ ರಕ್ತನಿಧಿ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿ ಡಾ ವೀಣಾ ಕುಮಾರಿ, ವಿಜಯ್ ಕುಮಾರ್ ಉದ್ಯಾವರ ಆಡಳಿತಾಧಿಕಾರಿ ತ್ರಿಶಾ ವಿದ್ಯಾ ಕಾಲೇಜ್,ಜೈ ತುಲುನಾಡ್(ರಿ) ನ ರಾಜೇಶ್, ಸತ್ಯದ ತುಳುವೆರ್(ರಿ) ಉಡುಪಿ-ಮಂಗಳೂರು ನ ಪ್ರವೀಣ್ ಕುರ್ಕಾಲ್, ತ್ರಿಶಾ ವಿದ್ಯಾ ಕಾಲೇಜ್ ರಾ, ಸೇ ಯೋಜನಾಧಿಕಾರಿ ಸಂತೋಷ್. ಎ, ಶೆಟ್ಟಿ , ಜೂನಿಯರ್ ಫ್ರೆಂಡ್ಸ್ ಕೋರಂಗ್ರಪಾಡಿಯ ಚೇತನ್, ಸಂಗಮ್ ಫ್ರೆಂಡ್ಸ್ ನ ಜಯಕರ್ ಕುಂದರ್, ಗ್ರಾಮ ಒನ್ ಕೇಂದ್ರ ಕೋಟೆ ಇದರ ಸಹನಾ ಕುಂದರ್, ರತ್ನಾಕರ್ ಉಡುಪಿ, ಮಹೇಶ್ ಎನ್ ಅಂಚನ್ ಭಾಗವಹಿಸಿದ್ದರು.
ಶಿಬಿರದಲ್ಲಿ ಒಟ್ಟು 82 ಯೂನಿಟ್ ಗಳಷ್ಟು ರಕ್ತವನ್ನು ಸಂಗ್ರಹಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಪ್ರಮೋದ್ ವಹಿಸಿದ್ದರು, ಸಂಘದ ಕಾರ್ಯದರ್ಶಿ ಸಂತೋಷ್ ಎನ್. ಎಸ್ ಸ್ವಾಗತಿಸಿದರು. ಕುಮಾರಿ ಶ್ರೀನಿಧಿ ಕಾರ್ಯಕ್ರಮ ನಿರೂಪಿಸಿ, ಕೋಶಾಧಿಕಾರಿ ಸನತ್ ಕೋಟ್ಯಾನ್ ವಂದಿಸಿದರು.
