ಪಡುಬಿದ್ರಿ : ಆದಿ ಮಾಯೆ ಆದಿಶಕ್ತಿ, ಅಣ್ಣಪ್ಪ ಪಂಜುರ್ಲಿ, ಕೊರಗಜ್ಜ ಕ್ಷೇತ್ರ ಜೀರ್ಣೋದ್ಧಾರದ ಲಕ್ಕಿಡಿಪ್ ಪುಸ್ತಕ ಬಿಡುಗಡೆ
Thumbnail
ಪಡುಬಿದ್ರಿ : ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಇತಿಹಾಸ ಪ್ರಸಿದ್ಧ ಪಡುಬಿದ್ರಿ ಆದಿ ಮಾಯೆ ಆದಿಶಕ್ತಿ ಹಾಗೂ ಅಣ್ಣಪ್ಪ ಪಂಜುರ್ಲಿ ಕೊರಗಜ್ಜ ದೈವಗಳ ಕ್ಷೇತ್ರದ ಜೀರ್ಣೋದ್ಧಾರದ ಪ್ರಯುಕ್ತ ಸೋಮವಾರ ಜಿಲ್ಲೆಯ ಇತಿಹಾಸ ಪ್ರಸಿದ್ಧ ಬೊಬ್ಬರ್ಯ ಕಾಂತೇರಿ ಜುಮಾದಿ ಹಾಗೂ ಕಲ್ಕುಡ ಕೊರಗಜ್ಜ ಪರಿವಾರ ದೈವಗಳ ದೈವಸ್ಥಾನದಲ್ಲಿ ಜೀರ್ಣೋದ್ಧಾರದ ಪ್ರಯುಕ್ತ ಅದೃಷ್ಟ ಕೂಪನ್ ಟಿಕೆಟ್ ಇರುವ ಪುಸ್ತಕದ ಬಿಡುಗಡೆ ಕಾರ್ಯಕ್ರಮವನ್ನು ಬೊಬ್ಬರ್ಯ ಯುವ ಸೇವಾ ಸಮಿತಿಯ ಅಧ್ಯಕ್ಷರಾದ ವರದರಾಜ ಕಾಮತ್ ಅವರಿಗೆ ಹಸ್ತಾಂತರ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಕಾರ್ಯಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಡುಬಿದ್ರಿ ಹಾಗೂ ಕ್ಷೇತ್ರ ಧರ್ಮದರ್ಶಿಗಳಾದ ಸುಧಾಕರ್ ಮಡಿವಾಳ, ಬೊಬ್ಬರ್ಯ ಯುವ ಸೇವಾ ಸಮಿತಿ ಗೌರವಾಧ್ಯಕ್ಷರು ಕ್ಷೇತ್ರದ ಮುಕ್ಕಾಲ್ದಿ ಶೆಟ್ಟಿ ಬಾಲೆ ಹಾಗೂ ಜೀರ್ಣೋದ್ಧಾರ ಸಮಿತಿಯ ಸಂಘಟನ ಕಾರ್ಯದರ್ಶಿಯಾದ ವಿನೋದ್ ಶೆಟ್ಟಿ ದೊಡ್ಡನ ಗುಡ್ಡೆ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಸಚಿಂದ್ರ ಶೆಟ್ಟಿ, ಜೀರ್ಣೋದ್ಧಾರ ಮಹಿಳಾ ಸಮಿತಿ ಅಧ್ಯಕ್ಷರಾದ ಮಮತಾ ಪಿ ಶೆಟ್ಟಿ ಹಾಗೂ ಸರ್ವ ಸದಸ್ಯರು ಉಪಸ್ಥಿತಿ ಇದ್ದರು.
09 Feb 2023, 01:28 PM
Category: Kaup
Tags: