ಕಾಪು : ಮಲ್ಲಾರಿನ ಪ್ರದೀಪ್ ಆರ್ ಭಂಡಾರಿಗೆ ಪಿಎಚ್ ಡಿ ಪದವಿ
Thumbnail
ಕಾಪು : ತಾಲೂಕಿನ ಮಲ್ಲಾರು ಗ್ರಾಮದ ಪ್ರದೀಪ್ ಭಂಡಾರಿಗೆ ಮಂಗಳೂರು ವಿವಿಯ ಘಟಕ ಕಾಲೇಜಾದ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರಿಯಪ್ಪ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಹಾಗೂ ಸ್ನಾತಕೋತ್ತರ ವಾಣಿಜ್ಯ ವಿಭಾಗದಲ್ಲಿ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರದೀಪ್ ಭಂಡಾರಿ ಪಾಲಿಸಿಸ್ ಅಂಡ್ ಪ್ರಾಕ್ಟಿಸಸ್ ಆಫ್ ಎಂಪ್ಲೊಯೀರೇಟೆನ್ಸನ್ ಮ್ಯಾನೇಜ್ಮೆಂಟ್ ಇನ್ ಟೆಲಿಕಾಂ ಸೆಕ್ಸರ್ ಎಂಬ ಸಂಶೋಧನಾ ಮಹಾ ಪ್ರಬಂಧಕ್ಕೆ ಮಂಗಳೂರು ವಿವಿ ಪಿಎಚ್ ಡಿ ಪದವಿ ನೀಡಿದೆ. ಪ್ರದೀಪ್ ಭಂಡಾರಿ ಮಲ್ಲಾರು ಗ್ರಾಮದ ದಿ. ರವೀಂದ್ರ ಭಂಡಾರಿ ಹಾಗೂ ದಿ. ಸುಜಯ ಭಂಡಾರಿಯವರ ಪುತ್ರರಾಗಿರುತಾರೆ. ಇವರು ಮಂಗಳೂರು ವಿಶ್ವವಿದ್ಯಾನಿಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಪಿ. ಎಸ್ ಯಡಪಡಿತ್ತಾಯ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದು, ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಮಂಗಳೂರು ವಿಶ್ವವಿದ್ಯಾನಿಲಯದ 41ನೇ ಘಟಿಕೋತ್ಸವದಲ್ಲಿ ಪಿ ಎಚ್ ಡಿ ಪ್ರಮಾಣಪತ್ರವನ್ನು ಸ್ವೀಕರಿಸಲಿದ್ದಾರೆ.
09 Feb 2023, 05:31 PM
Category: Kaup
Tags: