ಫೆಬ್ರವರಿ 12 : ಪಣಿಯೂರು ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಬ್ರಹ್ಮಕಲಶೋತ್ಸವ - ಬೆಳಪು ಡಾ| ಶ್ರೀ ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ
Thumbnail
ಕಾಪು : ತಾಲೂಕಿನ ಪಣಿಯೂರಿನ ‌ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ ಫೆಬ್ರವರಿ 21ರಿಂದ 25ರವರೆಗೆ ನಡೆಯಲಿದ್ದು ಈ ನಿಮಿತ್ತ ನಡೆಯಲಿರುವ ವೈದಿಕ ಕಾರ್ಯಕ್ರಮಗಳು, ಸಭಾ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ತಯಾರಿಗಾಗಿ ಪೂರ್ವಭಾವಿ ಸಭೆ ಫೆಬ್ರವರಿ 12, ಭಾನುವಾರ ಸಂಜೆ ಗಂಟೆ 4ಕ್ಕೆ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಬೆಳಪು ಡಾ| ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಗುತ್ತಿನಾ‌ರ್ ಯೋಗೀಶ್ ಶೆಟ್ಟೆ ಪಣಿಯೂರು ಗುತ್ತು, ಮುಂಬಯಿ ಸಮಿತಿ ಅಧ್ಯಕ್ಷರಾದ ಸುಕುಮಾರ್ ಶೆಟ್ಟಿ, ಸ್ಥಳ ವಂದಿಗರು ಮತ್ತು ಊರ ಹತ್ತು ಸಮಸ್ತರು, ಬಿ. ಶಂಕರ್, ಗುರಿಕಾರರು ಮತ್ತು ಸರ್ವ ಸಮಿತಿಯ ಸದಸ್ಯರು ಉಪಸ್ಥಿತಿಯಲ್ಲಿ ಸ್ವಾಗತ, ಮೆರವಣಿಗೆ, ಪ್ರಚಾರ, ಉಗ್ರಾಣ, ಸಭಾ ಕಾರ್ಯಕ್ರಮ, ಅನ್ನಸಂತರ್ಪಣೆ, ಪಾರ್ಕಿಂಗ್, ಸೆಕ್ಯೂರಿಟಿ ಮತ್ತು ಶುಚಿತ್ವ ಈ ಎಲ್ಲಾ ಸಮಿತಿಗಳ ಅಧ್ಯಕ್ಷರುಗಳು ಹಾಗೂ ಸರ್ವ ಸದಸ್ಯರುಗಳು ಮತ್ತು ಊರ ಸಮಸ್ತರೊಂದಿಗೆ ಸಭೆ ನಡೆಯಲಿದೆ.
Additional image
10 Feb 2023, 10:04 PM
Category: Kaup
Tags: