ಕಾಪು : ದೇವಾಡಿಗರ ಸಂಘದ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನಕ್ಕಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿಗೆ ಮನವಿ
Thumbnail
ಕಾಪು : ಇಲ್ಲಿನ ದೇವಾಡಿಗರ ಸಂಘದ ಸಮುದಾಯ ಭವನ ನಿರ್ಮಾಣಕ್ಕಾಗಿ ಸರಕಾರದಿಂದ ಅನುದಾನ ಪಡೆಯುವ ಬಗ್ಗೆ ಪ್ರಶಾಂತ್ ಕುಮಾರ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಅಧ್ಯಕ್ಷ ಗೋವರ್ಧನ್ ಸೇರಿಗಾರ್ ಮತ್ತು ದೇವಾಡಿಗ ಸಮಾಜದ ನಾಯಕರು ಸೇರಿ ಹೆಚ್ಚಿನ ಅನುದಾನ ನೀಡುವಂತೆ ಮನವಿ ನೀಡಿದರು. ಈ ಸಂದರ್ಭದಲ್ಲಿ ಗೌರವ ಸಲಹೆಗಾರರಾದ ನಾರಾಯಣ ದೇವಾಡಿಗ, ಭಾಸ್ಕರ್ ದೇವಾಡಿಗ, ಉಪಾಧ್ಯಕ್ಷ ರಂಜಿತ್ ದೇವಾಡಿಗ ಕಲ್ಯಾ, ಚಂದ್ರಶೇಖರ್ ದೇವಾಡಿಗ, ಕಾರ್ಯದರ್ಶಿ ದೀಪಕ್ ದೇವಾಡಿಗ ಮಲ್ಲಾರ್, ಕೋಶಾಧಿಕಾರಿ ಶ್ರೀಧರ್ ದೇವಾಡಿಗ, ಮಹಿಳಾ ಘಟಕದ ಅಧ್ಯಕ್ಷೆ ಸಾವಿತ್ರಿ ದೇವಾಡಿಗ, ಸದಸ್ಯರಾದ ರೇಣುಕಾ ಧನಂಜಯ್, ಜಯಂತಿ ದೇವಾಡಿಗ ಕಲ್ಯಾ, ಮಂಜುನಾಥ್ ದೇವಾಡಿಗ, ಯಶ್ವಿನ್ ದೇವಾಡಿಗ, ಪ್ರವೀಣ್ ದೇವಾಡಿಗ, ಪುರಸಭಾ ಸದಸ್ಯರಾದ ಲತಾ ದೇವಾಡಿಗ ಮತ್ತು ಸುರೇಶ್ ದೇವಾಡಿಗ ಉಪಸ್ಥಿತರಿದ್ದರು.
25 Feb 2023, 06:29 PM
Category: Kaup
Tags: