ಮಾಚ್೯ 12 : ಮಹತೋಭಾರ ಎಲ್ಲೂರು ಶ್ರೀ ವಿಶ್ವೇಶ್ವರ ದೇವರ ಸನ್ನಿಧಿಯಲ್ಲಿ ಬ್ರಹ್ಮಕಲಶೋತ್ಸವ ವರ್ಧಂತಿ ಉತ್ಸವ
Thumbnail
ಕಾಪು : ತಾಲೂಕಿನ ಮಹತೋಭಾರ ಎಲ್ಲೂರು ಶ್ರೀ ವಿಶ್ವೇಶ್ವರ ದೇವರ ಸನ್ನಿಧಿಯಲ್ಲಿ ಮಾಚ್೯ 12, ಭಾನುವಾರ ಬ್ರಹ್ಮಕಲಶೋತ್ಸವ ವರ್ಧಂತಿ ಉತ್ಸವವು ಜರಗಲಿದೆ ಆಗಮೋಕ್ತ ಕಾರ್ಯಕ್ರಮಗಳ ನೇತೃತ್ವವನ್ನು ವೇದಮೂರ್ತಿ ಪಾದೂರು ಶ್ರೀ ಲಕ್ಷ್ಮೀನಾರಾಯಣ ತಂತ್ರಿಗಳು ವಹಿಸಲಿರುವರು. ಬೆಳಿಗ್ಗೆ ಗಂಟೆ 10ಕ್ಕೆ ವಿಶ್ವೇಶ್ವರ ದೇವರಿಗೆ, ಗಣಪತಿ ಮತ್ತು ಅನ್ನಪೂರ್ಣೇಶ್ವರಿ ದೇವರಿಗೆ ಕಲಶಾಭಿಷೇಕ, ಗಂಟೆ 11 ಕ್ಕೆ ಮಹಾಪೂಜೆ, ಮಧ್ಯಾಹ್ನ ಗಂಟೆ 12.30ಕ್ಕೆ ಮಹಾ ಅನ್ನಸಂತರ್ಪಣೆ, ರಾತ್ರಿ ಗಂಟೆ 7ಕ್ಕೆ ಮಹಾರಂಗಪೂಜೆ, ರಾತ್ರಿ ಗಂಟೆ 8.30 ಕ್ಕೆ ಉತ್ಸವ ಬಲಿ ನಡೆಯಲಿದೆ.
11 Mar 2023, 04:34 PM
Category: Kaup
Tags: