ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ : ಪಡುಬಿದ್ರಿ ಚೆಂಡಿಗೆ ಚಾಲನೆ
ಪಡುಬಿದ್ರಿ : ಇತಿಹಾಸ ಪ್ರಸಿದ್ದ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಮಾ. 22ರಂದು ಚೆಂಡಿಗೆ ಚಾಲನೆ ನೀಡಲಾಯಿತು.
ದೇವಳದ ಅರ್ಚಕರಾದ ವೈ ಗುರುರಾಜ ಭಟ್ ರವರ ಪ್ರಾರ್ಥನೆಯೊಂದಿಗೆ ಚೆಂಡಿನ ಸೇವಾಕರ್ತರಾದ ಶರತ್ ಪೂಜಾರಿಯವರು ಬಗ್ಗೆಡಿ ಗುತ್ತಿನಾರ್ ಮತ್ತು ನಡ್ಸಾಲು ಗುತ್ತಿನಾರುಗಳಿಗೆ ಹಸ್ತಾಂತರಿಸಿ ಅವರು ಚೆಂಡನ್ನು ದೇವಳದ ಮುಂಭಾಗದ ವಠಾರಕ್ಕೆ ಎಸೆಯುವ ಮೂಲಕ ಚಾಲನೆ ನೀಡಲಾಯಿತು.
ಪ್ರತಿ ವರ್ಷದಂತೆ ಈ ಬಾರಿಯೂ ಊರಿನ ಹಿರಿಯರು, ಕಿರಿಯರು ಚೆಂಡು ಆಡುವ ಮೂಲಕ ಸಂಭ್ರಮಿಸಿದರು.
ಅನುವಂಶಿಕ ಮೊಕ್ತೇಸರರಾದ ಪಡುಬಿದ್ರಿ ಬೀಡು ರತ್ನಾಕರ ರಾಜ ಅರಸು ಕಿನ್ಯಕ್ಕ ಬಲ್ಲಾಳ್ ಮತ್ತು ಪಿ. ಭವಾನಿಶಂಕರ ಹೆಗ್ಡೆ, ಬಗ್ಗೆಡಿ ಗುತ್ತಿನಾರ್ ಶೇಖರ ಶೆಟ್ಟಿ, ನಡ್ಸಾಲು ಗುತ್ತಿನಾರ್ ಶ್ರೀನಾಥ ಹೆಗ್ಗಡೆ, ದೇವಸ್ಥಾನದ ಅರ್ಚಕರಾದ ವೈ. ಗುರುರಾಜ ಭಟ್, ದೇವಾಲಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಭಕ್ತರು ಉಪಸ್ಥಿತರಿದ್ದರು.
